ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡಿನಲ್ಲಿ ಮೂರು ದಿನ ಮಳೆ: ಆರೆಂಜ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

Published 1 ಡಿಸೆಂಬರ್ 2023, 16:00 IST
Last Updated 1 ಡಿಸೆಂಬರ್ 2023, 16:00 IST
ಅಕ್ಷರ ಗಾತ್ರ

ಚೆನ್ನೈ: ಚಂಡಮಾರುತದ ಪರಿಣಾಮ ಮುಂದಿನ ಮೂರು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಮಳೆಯಿಂದ ಆಗಬಹುದಾದ ಹಾನಿಯನ್ನು ನಿಭಾಯಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಮಿಳುನಾಡಿನ 12 ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಐ‌ಎಂಡಿ ಸೂಚಿಸಿದೆ.

ತಿರುವಳ್ಳೂರ್‌, ಚೆನ್ನೈ, ಕಾಂಚೀಪುರಂ, ರಾಣಿಪೇಟ್‌, ಚೆಂಗಾಲಪಟ್ಟು, ವಿಲ್ಲುಪುರಂ, ಕಡಾಲೋರ್‌ ಹಾಗೂ ಮೈಲಾದುದುರೈ ಜಿಲ್ಲೆಗಳಲ್ಲಿ ಡಿಸೆಂಬರ್‌ 4ರವರೆಗೆ ವಿಪರೀತ ಮಳೆಯಾಗುವ ಸಾಧ್ಯತೆ ಇದೆ. ವೆಲ್ಲೋರ್‌, ತಿರುವಣ್ಣಾಮಲೈ, ಕಲ್ಲಕುರಿಚಿ, ಪೆರಂಬಲೂರ್‌, ಅರಿಯಾಲೂರ್‌, ತಿರುವರೂರ್‌ ಹಾಗೂ ನಾಗಪಟ್ಟಣಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.

ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡಿಗೆ ಡಿಸೆಂಬರ್‌ 4ರಂದು ಚಂ‌ಡಮಾರುತ ಅಪ್ಪಳಿಸಲಿದೆ. ನಂತರ ಅದು ಉತ್ತರಾ‌ಭಿಮುಖವಾಗಿ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯೆಡೆಗೆ ಚಲಿಸಲಿದೆ. ನಂತರ ಡಿಸೆಂಬರ್‌ 5ರಂದು ನೆಲ್ಲೂರು ಮತ್ತು ಮಚಲಿಪಟ್ಟಣಂ ಮೂಲಕ ದಕ್ಷಿಣ ಆಂಧ್ರಪ್ರದೇಶವನ್ನು ದಾಟಲಿದೆ. ಈ ವೇಳೆ ಗಾಳಿ ವೇಗ 80–90 ಕಿ.ಮೀ ಇರಲಿದೆ ಎಂದು ಅದು ಹೇಳಿದೆ. 

ಚೆನ್ನೈನ‌ಲ್ಲಿ ಶುಕ್ರವಾರ ಭಾರಿ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತವಾಗಿದ್ದು ಆಟೊ ರಿಕ್ಷಾ ನೀರಿನಲ್ಲೇ ಸಾಗಿತು –ಎಎಫ್‌ಪಿ ಚಿತ್ರ
ಚೆನ್ನೈನ‌ಲ್ಲಿ ಶುಕ್ರವಾರ ಭಾರಿ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತವಾಗಿದ್ದು ಆಟೊ ರಿಕ್ಷಾ ನೀರಿನಲ್ಲೇ ಸಾಗಿತು –ಎಎಫ್‌ಪಿ ಚಿತ್ರ
ಚೆನ್ನೈನ‌ಲ್ಲಿ ಶುಕ್ರವಾರ ಭಾರಿ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತವಾಗಿದ್ದು ಟ್ರ್ಯಾಕ್ಟರ್‌ವೊಂದು ನೀರಿನಲ್ಲೇ ಚಲಿಸಿತು –ಎಎಫ್‌ಪಿ ಚಿತ್ರ
ಚೆನ್ನೈನ‌ಲ್ಲಿ ಶುಕ್ರವಾರ ಭಾರಿ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತವಾಗಿದ್ದು ಟ್ರ್ಯಾಕ್ಟರ್‌ವೊಂದು ನೀರಿನಲ್ಲೇ ಚಲಿಸಿತು –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT