ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವು ದೇವರುಗಳಿಂದ ವಿಶ್ವಗುರುವಾಗಿದೆ: ಉ.ಪ್ರದೇಶ ಸಚಿವ

Last Updated 30 ಮೇ 2022, 11:26 IST
ಅಕ್ಷರ ಗಾತ್ರ

ಲಖನೌ: 'ಭಾರತವು ದೇವರುಗಳಿಂದ ಜಾಗತಿಕವಾಗಿ ತನ್ನ ಗುರುತನ್ನು ಹೊಂದಿದೆ. ಅದರಿಂದಾಗಿಯೇ ವಿಶ್ವಗುರುವಾಗಿದೆ' ಎಂದು ಉತ್ತರ ಪ್ರದೇಶದ ಕಬ್ಬು ಅಭಿವೃದ್ಧಿ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಹೇಳಿದ್ದಾರೆ.

ಯಾವುದೇ ಸರ್ಕಾರ, ಸಮುದಾಯ ಅಥವಾ ಸಂಸ್ಥೆಗಳು ಈ ದೇವರುಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಸುಂದರಗೊಳಿಸಲು ಬಯಸಿದರೆ ಯಾವುದೇ ಆಕ್ಷೇಪಣೆಯನ್ನು ಹೊಂದಿರಬಾರದು ಎಂದು ಹೇಳಿದರು.

'ಅಯೋಧ್ಯೆಯು ರಾಮ ದೇವರ ಜನ್ಮಸ್ಥಳವಾಗಿದೆ. ಮಥುರಾವು ಕೃಷ್ಣ ದೇವರ ಜನ್ಮಸ್ಥಳವಾಗಿದೆ. ಕಾಶಿಯನ್ನು (ವಾರಣಾಸಿ) ಶಿವ ದೇವರು ಸೃಷ್ಟಿಸಿದರು. ಈ ದೇವರುಗಳಿಂದ ಭಾರತವು ತನ್ನ ಗುರುತನ್ನು ಹೊಂದಿದ್ದು, ಅದರಿಂದಲೇ ಜಾಗತಿಕ ಶಕ್ತಿಕೇಂದ್ರವಾಗಿದೆ' ಎಂದು ಹೇಳಿದ್ದಾರೆ.

'ಇಂದು ಜಗತ್ತು ಭಗವದ್ಗೀತೆಯನ್ನು ಪಠಿಸುತ್ತಿದೆ. ಶ್ರೀಕೃಷ್ಣನು ಅರ್ಜುನನಿಗೆ ಕಲಿಸಿದ ಪಾಠ - ಆದರ್ಶ ಮಗ, ಆದರ್ಶ ಪತಿ, ಆದರ್ಶ ಸಹೋದರ ಮತ್ತು ಆದರ್ಶ ಸ್ನೇಹಿತ ಹೇಗಿರಬೇಕೆಂಬ ಸಂದೇಶವನ್ನು ಇಡೀ ಜಗತ್ತು ರಾಮ ದೇವರಿಂದ ಪಡೆಯುತ್ತಿದೆ' ಎಂದು ಹೇಳಿದರು.

ಏತನ್ಮಧ್ಯೆ ನ್ಯಾಯಾಲಯದಲ್ಲಿರುವ ವಾರಣಾಸಿ ಜ್ಞಾನವಾಪಿ ಮಸೀದಿ ಹಾಗೂ ಮಥುರಾ ಶಾಹಿ ಈದ್ಗಾ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT