ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ನೀಡುವುದಕ್ಕೆ ಧರ್ಮ ಮತ್ತು ಧಾರ್ಮಿಕ ನಂಬಿಕೆಯಂತಹ ಹೊಸ ಮಾನದಂಡಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಿರುವುದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

ಧರ್ಮ ಮತ್ತು ನಂಬಿಕ ಆಧಾರದಲ್ಲಿ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡುವುದು ಸರಿಯಲ್ಲ. ಪ್ರಾದೇಶಿಕತೆ ಆಧಾರದಲ್ಲಿ ಸದಸ್ಯತ್ವ ನೀಡಬೇಕು ಎಂಬ ಸ್ಥಾಪಿತ ಮಾನದಂಡಕ್ಕೆ ಈ ನಡೆ ವಿರುದ್ಧವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪಿ.ಹರೀಶ್ ಹೇಳಿದ್ದಾರೆ.

ಭದ್ರತಾ ಮಂಡಳಿಯ ಭವಿಷ್ಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹೊಸ ಬದಲಾವಣೆಯು ಕಾಯಂ ಮತ್ತು ಕಾಯಂ ಅಲ್ಲದ ವಿಭಾಗಗಳಲ್ಲಿ ಯಾವುದೇ ಸುಧಾರಣೆಯನ್ನು ತರುವುದಿಲ್ಲ, ಬದಲಾಗಿ ಯಥಾಸ್ಥಿತಿಯೇ ಮುಂದುವರಿಯುವಂತೆ ಮಾಡಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.