ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19: ಸಕ್ರಿಯ ಪ್ರಕರಣ 2,311ಕ್ಕೆ ಏರಿಕೆ, ಕೇರಳದಲ್ಲಿ ಮೂವರು ಸಾವು

Published 20 ಡಿಸೆಂಬರ್ 2023, 7:33 IST
Last Updated 20 ಡಿಸೆಂಬರ್ 2023, 7:33 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಬುಧವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ ಹೊಸದಾಗಿ 614 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 2,311ಕ್ಕೆ ಏರಿಕೆಯಾಗಿದೆ.

ಮೇ 21ರ ನಂತರ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗಿದೆ.

ಮೃತಪಟ್ಟ ಮೂವರು ಕೇರಳ ರಾಜ್ಯದವರು. ಈವರೆಗೆ 5,33,321 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಪ್ರಸ್ತುತ ಕೋವಿಡ್‌ ಮರಣ ಪ್ರಮಾಣ ಶೇ 1.19ರಷ್ಟಿದೆ.

ದೇಶದಲ್ಲಿ ಇದುವರೆಗೆ 4.50 ಕೋಟಿ ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಈವರೆಗೆ ಒಟ್ಟು 4,44,70,346 ಮಂದಿ ಗುಣಮುಖರಾಗಿದ್ದಾರೆ.

ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ 98.81 ಆಗಿದೆ.

ದೇಶದಲ್ಲಿ ಈವರೆಗೆ 220.67 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT