ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ: ಭಾರತಕ್ಕೆ ಡಬ್ಲ್ಯುಎಚ್‌ಒ ಶ್ಲಾಘನೆ

Published 6 ಜೂನ್ 2023, 16:11 IST
Last Updated 6 ಜೂನ್ 2023, 16:11 IST
ಅಕ್ಷರ ಗಾತ್ರ

ಹೈದರಾಬಾದ್‌: ‘ಭಾರತವು ಕೋವಿಡ್‌ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಔಷಧಿಗಳ ತಯಾರಿಕೆ ಮತ್ತು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಇಡೀ ವಿಶ್ವದಲ್ಲಿಯೇ ನಿರ್ಣಾಯಕ ಪಾತ್ರವಹಿಸಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಜೆರೆಮಿ ಫರಾರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಜಿ20 ಆರೋಗ್ಯ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಮಾತನಾಡಿದ ಅವರು, ‘ವಿಶ್ವವು ಹಲವು ತೊಡಕುಗಳು ಮತ್ತು ಒತ್ತಡದಿಂದ ಸಂಕ್ರಮಣ ಸ್ಥಿತಿಗೆ ಸಿಲುಕಿರುವ ವೇಳೆ ಭಾರತವು ಜಿ20 ಸಭೆಯ ಆತಿಥ್ಯವಹಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ವಿಶ್ವ ಜಟಿಲ ಸಮಸ್ಯೆಗೆ ಸಿಲುಕಿತ್ತು. ಆತಂಕವೂ ಎದುರಾಗಿತ್ತು. ನಾವೆಲ್ಲರೂ ಕಳೆದು ಮೂರು ವರ್ಷಗಳ ಅವಧಿಯಲ್ಲಿ ಅಪಾಯಕಾರಿ ಸನ್ನಿವೇಶದಲ್ಲಿ ಕಾಲದೂಡಿದೆವು. ಇಂತಹ ಪರಿಸ್ಥಿತಿಯಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೋವಿಡ್‌ ಲಸಿಕೆ ಅಭಿವೃದ್ಧಿ, ಔಷಧಿ ತಯಾರಿಕೆ ಸೇರಿದಂತೆ ರೋಗ ನಿರ್ಣಯ ಮತ್ತು ಚಿಕಿತ್ಸೆ ನೀಡುವಲ್ಲಿ ಭಾರತವು ಮಹತ್ವದ ಪಾತ್ರವಹಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT