ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತೀಯ ಸೇನೆಯಿಂದ ಚರ್ಮ ಬ್ಯಾಂಕ್‌ ಸ್ಥಾಪನೆ

Published 18 ಜೂನ್ 2024, 12:32 IST
Last Updated 18 ಜೂನ್ 2024, 12:32 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸೇನೆಯು ತನ್ನ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರ ಚಿಕಿತ್ಸೆಗೆ ಅನುಕೂಲವಾಗುವಂತೆ ಚರ್ಮ ಬ್ಯಾಂಕ್‌ ಆರಂಭಿಸಿದೆ.

ಸೇನೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆರಂಭಿಸಿರುವ ಸೌಲಭ್ಯ ಇದಾಗಿದ್ದು, ತೀವ್ರ ಸುಟ್ಟಗಾಯಗಳು ಸೇರಿದಂತೆ ಚರ್ಮ ಸಂಬಂಧಿತ ತೊಂದರೆಗಳಿಗೆ ಚಿಕಿತ್ಸೆ ನೀಡಲು ಇದು ನೆರವಾಗಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಿದೆ.

ಪ್ಲಾಸ್ಟಿಕ್‌ ಸರ್ಜನ್‌, ಅಂಗಾಂಶ ಎಂಜಿನಿಯರ್‌ಗಳು ಹಾಗೂ ವಿಶೇಷ ತರಬೇತಿ ಹೊಂದಿದ ತಂತ್ರಜ್ಞರು ಸೇರಿದಂತೆ ಉನ್ನತ ತರಬೇತಿ ಪಡೆದ ವೈದ್ಯಕೀಯ ವೃತ್ತಿಪರರನ್ನು ಈ ಚರ್ಮ ಬ್ಯಾಂಕಿಗೆ ನೇಮಕ ಮಾಡಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಸಿಗೆ ಅಗತ್ಯವಿರುವ ಚರ್ಮದ ಸಂಗ್ರಹ, ಸಂಸ್ಕರಣೆ ಹಾಗೂ ವಿತರಣಾ ಕೇಂದ್ರವಾಗಿ ಈ ಬ್ಯಾಂಕ್ ಕಾರ್ಯ ನಿರ್ವಹಿಸುವುದು. ದೇಶದ ವಿವಿಧೆಡೆ ಇರುವ ಸೇನೆಯ ಕೇಂದ್ರಗಳಿಗೆ ಇದು ಸೇವೆ ಒದಗಿಸಲಿದೆ.

‘ಚರ್ಮದ ಅಂಗಾಂಶಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ಮೀಸಲಾದ ಸಂಪನ್ಮೂಲ ಕೇಂದ್ರವನ್ನು ಹೊಂದಿರುವುದು ಚರ್ಮ ಸಂಬಂಧಿ ತೊಂದರೆಗಳಿಂದ ಬಳಲುವ ಸಿಬ್ಬಂದಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ನೆರವಾಗಲಿದೆ’ ಎಂದು ಸೇನೆ ಆಸ್ಪತ್ರೆಯ ಕಮಾಂಡಂಟ್, ಲೆಫ್ಟಿನೆಂಟ್‌ ಜನರಲ್ ಅಜಿತ್ ನೀಲಕಂಠನ್ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT