ನವದೆಹಲಿ: ‘ಡಂಕಿ’ ಮಾರ್ಗದ ಮೂಲಕ ಅಮೆರಿಕಕ್ಕೆ ಕಳುಹಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಇಂಥ ಜನರು ಭಾರತದ ಪಾಸ್ಪೋರ್ಟ್ಗೆ ಅಪಕೀರ್ತಿ ತರುತ್ತಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರನ್ನು ಒಳಗೊಂಡ ನ್ಯಾಯಪೀಠವು, ‘ನಿಮ್ಮಂಥ ಜನರಿಂದಾಗಿಯೇ ಭಾರತದ ಪಾಸ್ಪೋರ್ಟ್ ಮೌಲ್ಯ ಕಡಿಮೆಯಾಗಿದೆ’ ಎಂದು ಹೇಳಿತು.

‘ಆರೋಪವು ಗಂಭೀರವಾದುದು’ ಎಂದು ಪ್ರತಿಪಾದಿಸಿದ ನ್ಯಾಯಾಲಯವು, ಹರಿಯಾಣದ ಓಂ ಪ್ರಕಾಶ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

‘ಡಂಕಿ ಮಾರ್ಗ’ ಎಂಬುದು ಅಕ್ರಮ ವಲಸೆಯ ವಿಧಾನವಾಗಿದೆ. ಸಾಮಾನ್ಯವಾಗಿ ಅಮೆರಿಕ ಅಥವಾ ಬ್ರಿಟನ್ ದೇಶದಲ್ಲಿ ಅಕ್ರಮವಾಗಿ ನೆಲಸಲು ಬಯಸುವವರು ಈ ಮಾರ್ಗ ಅನುಸರಿಸುತ್ತಾರೆ.

ಪ್ರಕರಣ ಏನು: ₹43 ಲಕ್ಷ ನೀಡಿದರೆ ಅಮೆರಿಕಕ್ಕೆ ತಲುಪಿಸುವುದಾಗಿ ಏಜೆಂಟ್ ಪ್ರಕಾಶ್ ಭರವಸೆ ನೀಡಿದ್ದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.

ಆರೋಪಿ ಪ್ರಕಾಶ್, 2024ರ ಸೆಪ್ಟೆಂಬರ್ನಲ್ಲಿ ದೂರುದಾರರನ್ನು ದುಬೈಗೆ ಕಳುಹಿಸಿದ್ದರು. ಅಲ್ಲಿಂದ ವಿವಿಧ ದೇಶಗಳಿಗೆ, ನಂತರ ಪನಾಮಾ ಅರಣ್ಯಕ್ಕೆ, ಅಲ್ಲಿಂದ ಮೆಕ್ಸಿಕೊಗೆ ಕಳುಹಿಸಿದ್ದರು. 2025ರ ಫೆಬ್ರುವರಿ1ರಂದು ಅಮೆರಿಕದ ಗಡಿ ದಾಟಿಸಿದ್ದರು. ಆದರೆ ಅಮೆರಿಕ ಪೊಲೀಸರು ದೂರುದಾರರನ್ನು ಬಂಧಿಸಿ ಫೆಬ್ರುವರಿ 16ರಂದು ಭಾರತಕ್ಕೆ ಗಡೀಪಾರು ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.