ಮುಂಬೈ: ದೇಶದ ಯುವಜನರು ಜ್ಞಾನ ಸಂಪಾದನೆಗೆ ವಿದೇಶಗಳಿಗೆ ತೆರಳಲು ಹಿಂಜರಿಯಬೇಡಿ. ಆದರೆ, ಆ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಭಾರತದ ಅಭಿವೃದ್ಧಿ ಮಾಡಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಮೋಹನ್ ಭಾಗವತ್ ಅವರು ಛತ್ರಪತಿ ಸಂಭಾಜಿನಗರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಎಂಐಟಿ ಕಾಲೇಜಿನಲ್ಲಿ ನಡೆದ ಯುವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

‘ಈಗಿನ ಯುವಜನರು ಅತಿ ಹೆಚ್ಚಿನ ದೇಶಭಕ್ತಿಯನ್ನು ಹೊಂದಿದ್ದಾರೆ. ಅವರಲ್ಲಿ ದೇಶದೆಡೆಗಿನ ಭಾವನೆಗಳು ಹೆಚ್ಚಾದಷ್ಟು, ಅವರು ರಾಷ್ಟ್ರಕ್ಕಾಗಿ ಹೆಚ್ಚಿನ ಸೇವೆ ಸಲ್ಲಿಸುತ್ತಾರೆ’ ಎಂದು ಹೇಳಿದ್ದಾರೆ.

ವಿದೇಶಗಳಿಗೆ ಹೋಗಿ ಜ್ಞಾನ ಸಂಪಾದನೆ ಮಾಡುವುದು ತಪ್ಪಲ್ಲ. ಆದರೆ ಅದನ್ನು ಭಾರತದ ಅಭಿವೃದ್ದಿಗೆ ಬಳಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಯುವಕರ ಕೊಡುಗೆ ಮಹತ್ವದ್ದು, ಅವರು ರಾಷ್ಟ್ರದ ಭವಿಷ್ಯವನ್ನು ಬರೆಯುತ್ತಾರೆ’ ಎಂದಿದ್ದಾರೆ.

ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಕಳೆದ 100 ವರ್ಷಗಳಲ್ಲಿ ಹಲವಾರು ಮಂದಿ ಆರ್ಎಸ್ಎಸ್ ಜತೆಗೆ ಕೆಲಸ ಮಾಡಿದ್ದಾರೆ. ಸಂಘವು ಯಾರನ್ನೂ ವಿರೋಧಿಸುವುದಿಲ್ಲ ಹಾಗೂ ಯಾರಿಗೂ ಸ್ಪರ್ಧಿಯಲ್ಲ. ಉತ್ತಮ ಸಮಾಜವನ್ನು ನಿರ್ಮಿಸುವುದಷ್ಟೇ ಅದರ ಕೆಲಸ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.