ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ್ ಸಿಂಗ್‌: ಸಂಸದೀಯ ಪಯಣ ಮುಗಿಸಿದ ಆರ್ಥಿಕ ಸುಧಾರಣೆಗಳ ಹರಿಕಾರ

Published 3 ಏಪ್ರಿಲ್ 2024, 19:26 IST
Last Updated 3 ಏಪ್ರಿಲ್ 2024, 19:26 IST
ಅಕ್ಷರ ಗಾತ್ರ

ನವದೆಹಲಿ: ವಿನಮ್ರತೆ, ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರರಾದ ಹಾಗೂ ಮಿತಭಾಷಿಯೂ ಆದ ಡಾ.ಮನಮೋಹನ್‌ ಸಿಂಗ್‌ ಅವರು ಸುದೀರ್ಘ 33 ವರ್ಷಗಳ ಸಂಸದೀಯ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.

91 ವರ್ಷದ ಸಿಂಗ್‌ ಅವರ ರಾಜ್ಯಸಭಾ ಸದಸ್ಯತ್ವ ಬುಧವಾರ ಕೊನೆಗೊಂಡಿತು. 1990ರಲ್ಲಿ ಆರ್ಥಿಕ ಸುಧಾರಣೆಗಳು, ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಶ್ರೇಯ ಸಿಂಗ್‌ ಅವರದು.

ಪಿ.ವಿ.ನರಸಿಂಹರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಮನಮೋಹನ್‌ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದರು. ನಂತರ, 2004ರಿಂದ 2014ರ ವರೆಗೆ ಪ್ರಧಾನಿಯಾಗಿದ್ದರು. ಈ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಕುರಿತು ಕೇಳಿಬಂದಿದ್ದ ಆರೋಪಗಳ ಕುರಿತು ಕ್ರಮ ಕೈಗೊಳ್ಳಲಿಲ್ಲ ಎಂಬ ಟೀಕೆಗಳನ್ನು ಸಿಂಗ್‌ ಎದುರಿಸಿದರು.

ಆರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಸಿಂಗ್‌ ಅವರು, ಒಮ್ಮೆಯೂ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಲಿಲ್ಲ. 1999ರಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರು, ಬಿಜೆಪಿಯ ವಿಜಯಕುಮಾರ್‌ ಮಲ್ಹೋತ್ರ ವಿರುದ್ಧ ಪರಾಭವಗೊಂಡಿದ್ದರು.

ಅಸ್ಸಾಂನಿಂದ ಐದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಅಲ್ಪಾವಧಿಗೆ ರಾಜಸ್ಥಾನದಿಂದ ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದ್ದರು. 1998ರ ಮಾರ್ಚ್‌ 21ರಿಂದ 2004ರ ಮೇ 21ರ ವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಮನಮೋಹನ್‌ ಸಿಂಗ್‌ ಅವರು ಕಡುಭ್ರಷ್ಟ ಸರ್ಕಾರವನ್ನು ಮುನ್ನಡೆಸಿದ್ದು ಮಾತ್ರವಲ್ಲ ತಮ್ಮ ಅವಧಿಯಲ್ಲಿ ಜನರನ್ನು ಮತ್ತಷ್ಟೂ ಬಡವರನ್ನಾಗಿ ಮಾಡಿದರು
- ಅಮಿತ್‌ ಮಾಳವೀಯ, ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT