ಭಾರತಕ್ಕೆ ಬಂದಿರುವ ರಫೇಲ್ ಯುದ್ಧ ವಿಮಾನಗಳನ್ನು ಯಾವಾಗ ಐಎಎಫ್ಗೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘2022ರೊಳಗೆ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ. ಕೋವಿಡ್–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಒಂದೆರಡು ವಿಮಾನಗಳುಬರುವುದು ವಿಳಂಬವಾಗಿದೆ. ಇನ್ನು ಉಳಿದ ವಿಮಾನಗಳೆಲ್ಲ ನಿಗದಿತ ಸಮಯಕ್ಕೆ ಬಂದು ತಲುಪಿವೆ. ನಿಗದಿತ ಅವಧಿಯಲ್ಲೇ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಗುತ್ತದೆ‘ ಎಂದು ಹೇಳಿದರು.