ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಡೋಲ್: ಕಾದ ಕಬ್ಬಿಣದಿಂದ ಬರೆ, ಹಸುಗೂಸು ಸಾವು

Published 30 ಡಿಸೆಂಬರ್ 2023, 16:19 IST
Last Updated 30 ಡಿಸೆಂಬರ್ 2023, 16:19 IST
ಅಕ್ಷರ ಗಾತ್ರ

ಶಹಡೋಲ್: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಒಂದೂವರೆ ತಿಂಗಳ ಹಸುಳೆಗೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದರಿಂದ ಮೃತಪಟ್ಟಿದೆ. 

ಮಧ್ಯಪ್ರದೇಶದ ಶಹಡೋಲ್ ಜಿಲ್ಲೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಉಸಿರಾಟದಿಂದ ಬಳಲುವ ಮಕ್ಕಳಿಗೆ ಬರೆ ಹಾಕುವ ಆಚರಣೆ ಇಲ್ಲಿದೆ. ಆಚರಣೆಯ ಭಾಗವಾಗಿ ಬಂಧ್ವಾ ಗ್ರಾಮದಲ್ಲಿ ಮಗುವಿಗೆ ಬರೆ ಹಾಕಲಾಗಿತ್ತು. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದಾಗಿ ಡಿಸೆಂಬರ್ 21ರಂದು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಅಂದಿನಿಂದಲೂ ಮಗುವಿಗೆ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶುಕ್ರವಾರ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT