ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಗೂಸನ್ನು ಸಾಯಿಸಿದ ಮಂಗ

Last Updated 13 ನವೆಂಬರ್ 2018, 17:11 IST
ಅಕ್ಷರ ಗಾತ್ರ

ಆಗ್ರಾ: ತಾಯಿಯ ಮಡಿಲಲ್ಲಿದ್ದ 12 ದಿನದ ಹಸುಗೂಸನ್ನು ಮಂಗವೊಂದು ಕಸಿದುಕೊಂಡು ಹೋಗಿ ಕಚ್ಚಿ ಸಾಯಿಸಿರುವ ಹೃದಯವಿದ್ರಾವಕ ಘಟನೆ ಇಲ್ಲಿ ನಡೆದಿದೆ.

ಸೋಮವಾರ ಸಂಜೆ ತಾಯಿ ಎದೆಹಾಲು ಕುಡಿಸುತ್ತಿದ್ದಾಗ ಮಗುವನ್ನು ಕಸಿದುಕೊಂಡು ಓಡಿದ ಮಂಗ, ಪಕ್ಕದ ಮನೆಯ ಚಾವಣಿ ಏರಿತು.

ಕುಟುಂಬದ ಸದಸ್ಯರು ಮಂಗನನ್ನು ಓಡಿಸುವಲ್ಲಿ ಯಶಸ್ವಿಯಾದರು. ಆದರೆ, ಮಗು ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗು ಈಗಾಗಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದರು. ಇದನ್ನು ನಂಬದ ಕುಟುಂಬದ ಸದಸ್ಯರು ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ಅದೇ ಉತ್ತರ ಬಂತು.

‘ಮಂಗಗಳು ಇತ್ತೀಚೆಗೆ ಆಕ್ರಮಣಕಾರಿ ನಡವಳಿಕೆಯನ್ನು ತೋರಿಸುತ್ತಿವೆ. ನೈಸರ್ಗಿಕ ಹಸಿರು ವಲಯ ನಾಶ ಮಾಡಿರುವುದರಿಂದ ಮಂಗಗಳಿಗೆ ಸಹಜವಾದ ಆಹಾರ ದೊರೆಯದಿರುವುದೇ ಇದಕ್ಕೆ ಕಾರಣ’ ಎಂದು ಪರಿಸರ ಕಾರ್ಯಕರ್ತ ಶ್ರವಣ್‌ ಕುಮಾರ್‌ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT