ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್ ಪೂರೈಕೆದಾರ ಸಂಸ್ಥೆಗೆ ನೋಟಿಸ್ ಜಾರಿಗೆ ಆದೇಶ

Published 8 ಸೆಪ್ಟೆಂಬರ್ 2023, 14:05 IST
Last Updated 8 ಸೆಪ್ಟೆಂಬರ್ 2023, 14:05 IST
ಅಕ್ಷರ ಗಾತ್ರ

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್‌ ಪ್ರಕರಣದ ಸಂಬಂಧ ರಕ್ಷಣಾ ಪರಿಕರಗಳ ಪೂರೈಕೆದಾರ ಸಂಸ್ಥೆಯಾದ ಡೆಫ್ಸಿಸ್ ಸಲ್ಯೂಷನ್ಸ್‌ಗೆ ಷೋಕಾಸ್ ನೋಟಿಸ್‌ ಜಾರಿಗೊಳಿಸಲು ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಈ ಸಂಸ್ಥೆ ಜೊತೆಗಿನ ವಹಿವಾಟು ನಡೆಸುವುದನ್ನು ಕೇಂದ್ರ ಸರ್ಕಾರವು ರದ್ದುಪಡಿಸಿತ್ತು. ಪೂರಕ ಮಾಹಿತಿಗಳೊಂದಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದೆ.

ರಕ್ಷಣಾ ಸಚಿವಾಲಯವು ವಹಿವಾಟು ಅಮಾನತು ರದ್ದುಪಡಿಸಿ ಡಿಸೆಂಬರ್ 9, 2022ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಂಸ್ಥೆಯು ಅರ್ಜಿ ಸಲ್ಲಿಸಿತ್ತು. ರದ್ದತಿಗೆ ಮೊದಲು ನೋಟಿಸ್ ಜಾರಿಗೊಳಿಸದೇ ಇರುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿತು. 

ಸೂಕ್ತ ಆದೇಶ ಹೊರಡಿಸುವ ಮೊದಲು ಅರ್ಜಿದಾರರಿಗೆ ಉತ್ತರಿಸಲು ಅವಕಾಶ ಕಲ್ಪಿಸುವುದು ಅಗತ್ಯ. ರದ್ದತಿ ಆದೇಶವು ಅನಿರ್ದಿಷ್ಟಾವಧಿಯಲ್ಲ. ನಂತರ ಆದೇಶ ಕೈಬಿಡಬೇಕೋ ಅಥವಾ ವಹಿವಾಟು ನಿಷೇಧಿಸಬೇಕೋ ಎಂಬ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ತಿಳಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT