ಜೈಪುರ: ತಾಯಿಯನ್ನು ಕೊಂದು 38 ವರ್ಷದ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
.Bengaluru Crime | ಬ್ಯಾಂಕ್ ವ್ಯವಸ್ಥಾಪಕನ ಪತ್ನಿ ಆತ್ಮಹತ್ಯೆ.
68 ವರ್ಷದ ತಾಯಿ ಪುಷ್ಪಾಂಜಲಿ ಎಂಬವರನ್ನು ಮಗ ಅಭಿಜಿತ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮುಹಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಶ್ವಂತ್ ಕಾಲೊನಿಯ ಬಾಡಿಗೆ ಫ್ಲ್ಯಾಟ್ ಒಂದರಲ್ಲಿ ಘಟನೆ ನಡೆದಿದೆ.

ಮನೆಗೆ ಬೀಗ ಹಾಕಿ ಬಳಿಕ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರೈನ್ ಟವರ್ ಆಸ್ಪತ್ರೆ ಬಳಿ ವ್ಯಕ್ತಿಯೊಬ್ಬನಿಗೆ ರೈಲು ಡಿಕ್ಕಿ ಹೊಡೆದಿದೆ ಎನ್ನುವ ವಿಷಯ ಸೋಮವಾರ ಗೊತ್ತಾದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಕುಮಾರ್ ಶರ್ಮಾ ತಿಳಿಸಿದ್ದಾರೆ.
.ಮೈಕ್ರೊ ಫೈನಾನ್ಸ್ ಕಿರುಕುಳ ಆರೋಪ: ವ್ಯಕ್ತಿ ಆತ್ಮಹತ್ಯೆ.
ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದಾಗ, ಆತನ ಜೇಬಿನಲ್ಲಿ ಕೀ ಹಾಗೂ ಕೆಲವು ದಾಖಲೆ ಪತ್ರಗಳಿಂದಾಗಿ ಗುರುತು ಪತ್ತೆ ಸಾಧ್ಯವಾಯಿತು. ಬಳಿಕ ವಿಳಾಸ ಪತ್ತೆ ಮಾಡಿದೆವು ಎಂದು ಶರ್ಮಾ ಹೇಳಿದ್ದಾರೆ.

ಫ್ಲ್ಯಾಟ್ನಲ್ಲಿ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಿಂದ ಚಾಕು ವಶಪಡಿಸಿಕೊಳ್ಳಲಾಗಿದೆ.

ಅಭಿಜಿತ್ ಈ ಹಿಂದೆ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ, ಘಟನೆ ನಡೆದ ಸಮಯದಲ್ಲಿ ನಿರುದ್ಯೋಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಲಾಗಿದ್ದು, ಅಪರಾಧದ ಹಿಂದಿನ ಉದ್ದೇಶ ಮತ್ತು ಘಟನೆಗೆ ಸಂಬಂಧಿಸಿದ ಇತರ ಅಂಶಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.
.ಕಲಬುರಗಿ | ಮಗಳ ಮದುವೆಗೆ ಹಣದ ಸಮಸ್ಯೆ: ಸಿಆರ್ಪಿಎಫ್ ಯೋಧ ಆತ್ಮಹತ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.