ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟ’ರನ್ನು ಕೊಲ್ಲುವ ಹೇಳಿಕೆ: ಮಲ್ಲಿಕ್‌ ಕ್ಷಮೆ

‘ಉಗ್ರರು ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಲಿ‘ ಹೇಳಿಕೆಗೆ ವಿಷಾದ
Last Updated 22 ಜುಲೈ 2019, 19:35 IST
ಅಕ್ಷರ ಗಾತ್ರ

ಶ್ರೀನಗರ: ‘ಭಯೋತ್ಪಾದಕರು ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಬೇಕು’ ಎಂಬ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್‌ ಮಲ್ಲಿಕ್‌ ವಿಷಾದ ವ್ಯಕ್ತಪಡಿಸಿದ್ದಾರೆ.

‘ವ್ಯಾಪಕ ಭ್ರಷ್ಟಾಚಾರದಿಂದ ನೊಂದು, ಕೋಪ ಮತ್ತು ಭ್ರಮನಿರಸನದಿಂದ ನೀಡಿದ ಹೇಳಿಕೆ ಅದಾಗಿತ್ತು. ಎಲ್ಲಿ ಗಮನಿಸಿದರೂ ಭ್ರಷ್ಟಾಚಾರ ಕಾಣಿಸುತ್ತಿದೆ. ಅದು ನನ್ನ ಭಾವನೆ. ಸಾಂವಿಧಾನಿಕ ಮುಖ್ಯಸ್ಥನಾಗಿ ಅಂಥ ಹೇಳಿಕೆ ನೀಡಬಾರದಿತ್ತು‘ ಎಂದಿದ್ದಾರೆ.

’ರಾಜ್ಯಪಾಲನಾಗಿ ಹೀಗೆ ಹೇಳ ಬಾರದಿತ್ತು ಎಂಬ ಕಾರಣಕ್ಕೆ ವಿಷಾದಿ ಸುತ್ತೇನೆ. ಆದರೆ, ಒಮ್ಮೆ ಈ ಸ್ಥಾನದಿಂದ ನಿರ್ಗಮಿಸಿದರೆ ಅದೇ ಹೇಳಿಕೆಯನ್ನು ನೀಡುತ್ತೇನೆ. ಅದರ ಪರಿಣಾಮವನ್ನು ಎದುರಿಸಲು ಸಿದ್ಧನಿದ್ದೇನೆ‘ ಎಂದರು.

ಲಡಾಖ್‌ ವಲಯದ ಕಾರ್ಗಿಲ್‌ನಲ್ಲಿ ಭಾನುವಾರ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ‘ಉಗ್ರಗಾಮಿಗಳು ಜನಸಾಮಾನ್ಯರ ಬದಲಿಗೆ ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಬೇಕು‘ ಎಂದು ಹೇಳಿದ್ದರು. ಇದು, ವಿವಾದಕ್ಕೆ ಕಾರಣವಾಗಿತ್ತು.

‘ಇಂದಿನಿಂದ ಮುಖ್ಯವಾಹಿನಿ ರಾಜ ಕಾರಣಿ, ಸೇವಾನಿರತ, ನಿವೃತ್ತ ಅಧಿಕಾರಿ ಜಮ್ಮು–ಕಾಶ್ಮೀರದಲ್ಲಿ ಹತ್ಯೆಗೀಡಾದರೆ, ಅದು ರಾಜ್ಯಪಾಲರು ಭಾವನಾತ್ಮಕವಾಗಿ ಹೊರಡಿಸಿದ ಆದೇಶದಂತೆ ನಡೆದ ಕೊಲೆ‘ ಎಂದು ಅಬ್ದುಲ್ಲಾ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT