ನವದೆಹಲಿ: ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಪ್ರಸಕ್ತ ವರ್ಷದ ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಡೆದಿದ್ದು, ಪ್ರಮುಖ ಮೂರು ಹುದ್ದೆಗಳು ಎಡಪಕ್ಷ ಬೆಂಬಲಿತ ಎಐಎಸ್ಎ–ಡಿಎಸ್ಎಫ್ ಸಂಘಟನೆ ಪಾಲಾಗಿದೆ. ಒಂಬತ್ತು ವರ್ಷಗಳ ಬಳಿಕ ಎಬಿವಿಪಿ ಹುದ್ದೆಯೊಂದನ್ನು ಗಿಟ್ಟಿಸಿಕೊಂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ವೈಭವ್ ಮೀನಾ ಅವರು ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಪಡೆದಿದ್ದು, ‘ಎಡಪಂಥ ಸಂಘಟನೆಗಳ ಪ್ರಾಬಲ್ಯ ಹೊಂದಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (JNU) ರಾಷ್ಟ್ರೀಯವಾದದ ಹೊಸ ಉದಯವಾಗಿದೆ. ದೇಶವನ್ನು ಪುನರ್ ನಿರ್ಮಾಣ ಮಾಡುವ ಶಿಕ್ಷಣದ ಶಕ್ತಿ ಮತ್ತು ಸಾಂಸ್ಕೃತಿಕ ಗುರುತು ಸ್ಥಾಪಿಸುವಲ್ಲಿ ನಂಬಿಕೆ ಇಟ್ಟ ವಿದ್ಯಾರ್ಥಿಗಳ ಗೆಲುವು’ ಎಂದು ಬಣ್ಣಿಸಿದ್ದಾರೆ.

ಮೀನಾ ಅವರು 1,518 ಮತಗಳನ್ನು ಪಡೆದರು. ಇವರು ಎಐಎಸ್ಎ ಅಭ್ಯರ್ಥಿ ನರೇಶ್ ಕುಮಾರ್ ಅವರನ್ನು 85 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಜೆಎನ್ಯು ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ 2015–16ರಲ್ಲಿ ಎಬಿವಿಪಿ ಗೆಲುವು ದಾಖಲಿಸಿತ್ತು. 2025ರ ಚುನಾವಣೆಯಲ್ಲಿ ಎಡಪಕ್ಷ ಬೆಂಬಲಿತ ಎಐಎಸ್ಎ–ಡಿಎಸ್ಎಫ್ ಸಂಘಟನೆಯು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆ ಗೆದ್ದುಕೊಂಡಿದೆ. ಚುನಾವಣೆಯಲ್ಲಿ ಈ ಸಂಘಟನೆಯ ಕ್ಲೀನ್ ಸ್ವೀಪ್ಗೆ ಮೀನಾ ಗೆಲುವು ತಡೆಯೊಡ್ಡಿತು. 46 ಕೌನ್ಸಲರ್ ಹುದ್ದೆಗಳಲ್ಲಿ ಎಬಿವಿಪಿ 24 ಸ್ಥಾನಗಳನ್ನು ಗೆದ್ದುಕೊಂಡಿದೆ.

ಏ. 25ರಂದು ಚುನಾವಣೆ ನಡೆದಿತ್ತು. ಶೇ 70ರಷ್ಟು ಮತದಾನವಾಗಿತ್ತು. 7,906 ಅರ್ಹ ಮತದಾರರಲ್ಲಿ 5,500 ವಿದ್ಯಾರ್ಥಿಗಳು ಮತಚಲಾವಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.