If police is removed for one day, farmers will thrash BJP leaders in Gujarat, says Kejriwal

ಸುರೇಂದ್ರನಗರ: ಗುಜರಾತ್ನಲ್ಲಿ ಒಂದು ದಿನ ಪೊಲೀಸರು ಇಲ್ಲದಿದ್ದರೆ ರೈತರು ಬಿಜೆಪಿ ನಾಯಕರನ್ನು ಹಿಡಿದು ಥಳಿಸುತ್ತಾರೆ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಸುರೇಂದ್ರ ನಗರ ಜಿಲ್ಲೆಯ ಸುದಮಡ ಹಳ್ಳಿಯ ಕಿಸಾನ್ ಮಹಾಪಂಚಾಯತ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುಜರಾತ್ನಲ್ಲಿ ಭಾರತೀಯ ಜನತಾ ಪಕ್ಷದ ಪತನದ ಕೌಂಟ್ಡೌನ್ ಆರಂಭವಾಗಿದೆ. ಮುಂದಿನ 50 ವರ್ಷಗಳಲ್ಲಿ ಬಿಜೆಪ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನರನ್ನು ಜೈಲಿಗೆ ಕಳುಹಿಸುವುದನ್ನು ಬಿಟ್ಟರೆ ಬಿಜೆಪಿಗೆ ಬೇರೆ ಏನೂ ತಿಳಿದಿಲ್ಲ. 75 ವರ್ಷಗಳಲ್ಲಿ, ಗುಜರಾತ್ನ ಜನರು ಇಂತಹ ಕ್ರೂರ, ದಬ್ಬಾಳಿಕೆ ಮತ್ತು ದುರಹಂಕಾರಿ ಸರ್ಕಾರವನ್ನು ಎಂದೂ ನೋಡಿಲ್ಲ. ಇಂದು ರೈತರು ಬಹಳ ಕೋಪಗೊಂಡಿದ್ದಾರೆ. ಈ ಬಿಜೆಪಿಯವರು ಸಂಪೂರ್ಣ ಹೇಡಿಗಳು. ಅವರು ಪೊಲೀಸರ ಹಿಂದೆ ಅಡಗಿಕೊಳ್ಳುತ್ತಾರೆ" ಎಂದು ಕೇಜ್ರಿವಾಲ್ ಹೇಳಿದರು.

ಗುಜರಾತ್ನ ಬೊಟಾದ್ ಜಿಲ್ಲೆಯಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ವೇಳೆ ನಡೆದ ಹಿಂಸಾಚಾರದಲ್ಲಿ ಬಂಧಿತರ ಪರವಾಗಿ ಈ ಮಹಾಪಂಚಾಯತ್ ಆಯೋಜಿಸಲಾಗಿತ್ತು.

‘ನೀವು ಕೇವಲ ಒಂದು ದಿನ ಪೊಲೀಸ್ ರಕ್ಷಣೆಯನ್ನು ತೆಗೆದುಹಾಕಿದರೆ, ಈ ರೈತರು ಬಿಜೆಪಿ ನಾಯಕರನ್ನು ಅವರ ಮನೆಗಳಿಂದ ಹೊರಗೆಳೆದು ನಿರ್ದಯವಾಗಿ ಥಳಿಸುತ್ತಾರೆ. ರೈತರು ಅವರನ್ನು ಎಷ್ಟು ಕೆಟ್ಟದಾಗಿ ಹೊಡೆಯುತ್ತಾರೆ ಎಂದರೆ ಅಡಗಿಕೊಳ್ಳಲು ಸ್ಥಳ ಸಿಗುವುದಿಲ್ಲ. ಕೇವಲ ಒಂದು ದಿನ ಪೊಲೀಸರ ಭದ್ರತೆ ತೆಗೆದುಹಾಕಿ. ಗುಜರಾತ್ನಲ್ಲಿ ಬಿಜೆಪಿ ನಾಯಕರ ಜೀವನವನ್ನು ರೈತರು ನರಕವಾಗಿಸುತ್ತಾರೆ’ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿದರು.

ರೈತರ ಸಮಸ್ಯೆಗಳ ಕುರಿತಾಗಿ ಧ್ವನಿ ಎತ್ತಿದ್ದಕ್ಕೆ ರಾಜು ಕರ್ಪಾಡಾ ಮತ್ತು ಪ್ರವೀಣ್ ರಾಮ್ ಸೇರಿದಂತೆ 80 ಮಂದಿ ರೈತರು ಹಾಗೂ ಎಎಪಿ ನಾಯಕರ ಮೇಲೆ ಹತ್ಯೆ ಯತ್ನ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗಿದೆ ಎಂದು ಕೇಜ್ರಿವಾಲ್ ದೂರಿದರು.

ಅಕ್ಟೋಬರ್ 12ರಂದು ಬೊಟಾದ್ ಜಿಲ್ಲೆಯಲ್ಲಿ ಎಎಪಿ ಆಯೋಜಿಸಿದ್ದ ಕಿಸಾನ್ ಮಹಾಪಂಚಾಯತ್ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಸಂದರ್ಭ ಮೂವರು ಪೊಲೀಸರು ಗಾಯಗೊಂಡಿದ್ದರು. ಬಳಿಕ, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ ಕೇಜ್ರಿವಾಲ್, ಬ್ರಿಟಿಷರ ವಿರುದ್ಧ ಇದೇ ರೀತಿಯ ರೈತ ಚಳುವಳಿಗಳನ್ನು ಪಟೇಲ್ ಮುನ್ನಡೆಸಿದ್ದರು. ಆದರೆ, ಅವರು ಎಂದಿಗೂ ಲಾಠಿ ಚಾರ್ಜ್ ಮಾಡಿಲ್ಲ ಅಥವಾ ರೈತರನ್ನು ಜೈಲಿಗೆ ಕಳುಹಿಸಿಲ್ಲ. ಆದರೆ, ಸ್ವಾತಂತ್ರ್ಯದ ನಂತರ, ಇಂತಹ ಭ್ರಷ್ಟ, ದಬ್ಬಾಳಿಕೆಯ ಬಿಜೆಪಿ ಸರ್ಕಾರವು ತನ್ನದೇ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಸರ್ದಾರ್ ಪಟೇಲ್ ಎಂದಿಗೂ ಊಹಿಸಿರಲಿಲ್ಲ. ತನ್ನದೇ ಆದ ರೈತರ ಮೇಲೆ ಲಾಠಿ ಚಾರ್ಜ್ ಮಾಡುವ, ಅವರ ಮೇಲೆ ಅಶ್ರುವಾಯು ಪ್ರಯೋಗಿಸುವ, ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮತ್ತು ಅವರನ್ನು ಜೈಲಿಗೆ ಕಳುಹಿಸುವ ಸರ್ಕಾರ ಬರುತ್ತದೆ ಎಂದು ಪಟೇಲ್ ಊಹಿಸಿರಲಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.