ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ವೈದ್ಯ ಸೇರಿ ಆರು ಜನ ಬಂಧನ

ತ್ರಿಶೂರ್ ಜಿಲ್ಲೆಯ ರಸ್ಟೊರಂಟ್ ಒಂದರ ಹಿಂದುಗಡೆ ಅಕ್ರಮ
Published 9 ಡಿಸೆಂಬರ್ 2023, 10:40 IST
Last Updated 9 ಡಿಸೆಂಬರ್ 2023, 10:40 IST
ಅಕ್ಷರ ಗಾತ್ರ

ತ್ರಿಶೂರ್, ಕೇರಳ: ತ್ರಿಶೂರ್ ಜಿಲ್ಲೆಯ ರಸ್ಟೊರಂಟ್ ಒಂದರ ಹಿಂದುಗಡೆ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ವೈದ್ಯ ಹಾಗೂ ಆತನ ಐವರು ಸಹಚರರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಪೊಲೀಸ್ ತಿಳಿಸಿದ್ದಾರೆ.

44 ವರ್ಷದ ಅಲೋಪತಿ ವೈದ್ಯ ಅನೂಪ್ ನೇತೃತ್ವದ ತಂಡ ಇರಿಂಜಾಲಕುಡದಲ್ಲಿ ಕೆಲವು ದಿನಗಳಿಂದ ಅಕ್ರಮ ಮಧ್ಯ ಘಟಕವನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಅಕ್ರಮ ಮದ್ಯ ಉತ್ಪಾದನಾ ಘಟಕದ ಬಗ್ಗೆ ಅಬಕಾರಿ ಆಯುಕ್ತರ ದಳಕ್ಕೆ ಖಚಿತ ಮಾಹಿತಿ ದೊರಕುತ್ತಿದ್ದಂತೆ, ದಾಳಿ ನಡೆಸಿ 1,072 ಲೀಟರ್‌ ನಕಲಿ ಮದ್ಯ, ಎರಡು ಕಾರು ಮತ್ತು ಏರ್‌ಗನ್‌ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT