ತಿರುವನಂತಪುರ: ಕೇರಳದ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಭಾರಿ ನಾಶ–ನಷ್ಟ ಉಂಟಾಗಿದ್ದು, ನದಿ ಹಾಗೂ ಅಣೆಕಟ್ಟು ತುಂಬಿವೆ. ಏಳು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
.ಕೇರಳ | ಒಂದು ತಿಂಗಳ ಬಳಿಕ ಕೊನೆಗೂ ಟೇಕ್ ಆಫ್ ಆದ ಬ್ರಿಟನ್ ಯುದ್ಧ ವಿಮಾನ.
ಆಳಪ್ಪುಳ, ಕೊಟ್ಟಯಂ,ಇಡುಕ್ಕಿ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. 11 ಸೆಂ.ಮೀ ನಿಂದ 20 ಸೆಂ.ಮೀ ಮಳೆಯಾಗಬಹುದು ಎಂದು ಅಂದಾಜಿಸಿದೆ.

ಕೋಯಿಕ್ಕೋಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾತ್ರಿ ಇಡೀ ವರ್ಷಧಾರೆಯಾಗಿದ್ದು, ಭಾರಿ ಗಾಳಿಯಿಂದಾಗಿ ಮರಗಳು ನೆಲಕ್ಕುರುಳಿವೆ. ಮನೆಗಳು,ಕಟ್ಟಡಗಳು, ವಾಹನಗಳಿಗೆ ಹಾನಿಯಾಗಿವೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ವಿದ್ಯುತ್ ಸರಬರಾಜಿಗೆ ಅಡಚಣೆ ಉಂಟಾಗಿದೆ. ಕೊಟ್ಟಾಯಂ, ಕಣ್ಣೂರು ಜಿಲ್ಲೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ.
.ಜಿಲ್ಲಾ ನ್ಯಾಯಾಲಯಗಳಲ್ಲಿ AI ಬಳಕೆ: ಮಾರ್ಗಸೂಚಿ ಹೊರತಂದ ಕೇರಳ ಹೈಕೋರ್ಟ್ .
ವಯನಾಡ್ನ ಬಾನ್ಸುರ ಸಾಗರ್ ಹಾಗೂ ಪಾಲಕ್ಕಾಡ್ನ ಅಲಿಯೂರ್ ಅಣೆಕಟ್ಟೆಯ ಗೇಟುಗಳನ್ನು ತೆರೆಯಲಾಗಿದ್ದು, ಸ್ಥಳೀಯರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ.
.ಕೇರಳ: ಪ್ರೇಯಸಿಯ ಕತ್ತು ಹಿಸುಕಿ ಕೊಂದು ಸ್ನೇಹಿತರಿಗೆ ವಿಡಿಯೊ ಕರೆ ಮಾಡಿದ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.