ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ₹10 ಕೋಟಿ ಲಾಟರಿ ಹಣ ಗೆದ್ದ 11 ಪೌರಕಾರ್ಮಿಕ ಮಹಿಳೆಯರು!

Published 28 ಜುಲೈ 2023, 2:46 IST
Last Updated 28 ಜುಲೈ 2023, 2:46 IST
ಅಕ್ಷರ ಗಾತ್ರ

ಮಲಪ್ಪುರಂ: ನಗರ ಸ್ವಚ್ಛಗೊಳಿಸುವ 11 ಮಹಿಳೆಯರ ಪೌರಕಾರ್ಮಿಕ ಗುಂಪೊಂದು ₹10 ಕೋಟಿ ಲಾಟರಿ ಹಣ ಗೆದ್ದಿದೆ.  ಕೇರಳ ರಾಜ್ಯ ಸರ್ಕಾರದ ಲಾಟರಿ ವಿಭಾಗ ಮಾನ್ಸೂನ್‌ ಬಂಪರ್‌ ಆಪರ್‌ ವಿಜೇತರನ್ನು ಘೋಷಣೆ ಮಾಡಿದ್ದು 11 ಮಹಿಳೆಯರು ವಿಜೇತರಾಗಿದ್ದಾರೆ.

ಪರಪ್ಪಂನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ‘ಯ  11 ಮಹಿಳೆಯರು ತಲಾ ₹25 ಷೇರು ಹಾಕಿ ವಾರದ ಹಿಂದೆ ₹250ನ ಲಾಟರಿ ಟಿಕೇಟ್‌ ಖರೀದಿಸಿದ್ದರು. ಇದೀಗ ಅವರು ಕೋಟಿ ಕೋಟಿ ಹಣ ಗೆದ್ದಿದ್ದಾರೆ.

‘ನಾವು ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೇಟ್‌ ಖರೀದಿಸಿದ್ದೇವು, ಈಗ ಬಹುಮಾನ ಗೆದ್ದಿರುವುದು ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ ಲಾಟರಿ ಹಣ ವಿಜೇತೆ ರಾಧಾ ಎನ್ನುವ ಮಹಿಳೆ. 

‘ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ’ ಎನ್ನುತ್ತಾರೆ ಇನ್ನೊಬ್ಬ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT