ತವಾಂಗ್: ಸಂಸತ್ ಕಲಾಪಗಳು ಸುಗಮವಾಗಿ ನಡೆಯುವುದು ರಾಹುಲ್ ಗಾಂಧಿಯವರಿಗೆ ಬೇಡ, ಅವರಿಗೆ ಹಾಗೂ ಅವರ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಕೆಲವೊಂದು ಎನ್ಜಿಒಗಳು ಅವರಿಗೆ ಹೇಳಿದ್ದು, ಹೀಗಾಗಿಯೇ ಅವರು ಸದನಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
.ಪ್ರಧಾನಿಗೆ ಅವಹೇಳನ; ರಾಹುಲ್ ಗಾಂಧಿ ವಿರುದ್ಧ ಆಕ್ರೋಶ.
ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಲು ನಾವು ಹಲವು ಪ್ರಯತ್ನಗಳನ್ನು ಮಾಡಿದರೂ ಅವು ವ್ಯರ್ಥವಾಗಿವೆ. ಹೀಗಾಗಿ ಸಂಸತ್ತಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು, ಕಾಂಗ್ರೆಸ್ ಪಕ್ಷವನ್ನು ಸಮಾಧಾನಪಡಿಸಲು ಸರ್ಕಾರವು ಇನ್ನು ಮುಂದೆ ಯಾವುದೇ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ರಿಜಿಜು ತಿಳಿಸಿದ್ದಾರೆ.
.ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರಗ ಜ್ಞಾನೇಂದ್ರ ಆಪ್ತಸಹಾಯಕನ ಬಂಧನ.
‘ರಾಹುಲ್ ಗಾಂಧಿಯವರಿಗೆ ಸದನವನ್ನು ನಡೆಯುವುದನ್ನು ಬೇಕಿಲ್ಲ. ಅವರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲೇ ಆಸಕ್ತಿ. 'ನಿಮ್ಮ ದಿನಗಳು ಬರಲಿವೆ' ಎಂದು ಕೆಲವು ಎನ್ಜಿಒಗಳು ರಾಹುಲ್ ಗಾಂಧಿಯವರಿಗೆ ಬೋಧನೆ ಮಾಡಿವೆಯಷ್ಟೆ, ಆದರೆ ಅವರ ದಿನಗಳು ಬರುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರ ಸದಸ್ಯರ ಸಂಖ್ಯೆ ಮತ್ತಷ್ಟು ಕುಸಿಯಲಿದೆ’ಎಂದು ಅವರು ಇಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಎಲ್ಲಾ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆಗಿಲ್ಲ. ಸಣ್ಣ ಪಕ್ಷಗಳ ಸದಸ್ಯರಿಗೆ ತಮಗೆ ನಿಗದಿಯಾದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಣ್ಣ ಪಕ್ಷಗಳು ರಾಹುಲ್ ಗಾಂಧಿ ಬಗ್ಗೆ ಅಸಮಾಧಾನ ಹೊಂದಿವೆ. ಅವರಲ್ಲಿ ಕೆಲವರು ಸ್ಪೀಕರ್ ವಿರುದ್ಧದ ನಿರ್ಣಯಕ್ಕೆ ಸಹಿಯನ್ನೂ ಹಾಕಿಲ್ಲ’ ಎಂದು ಹೇಳಿದ್ದಾರೆ.
.ನರವಣೆಯವರ ಪುಸ್ತಕದ ಭಯದಿಂದ ಮೋದಿ ಸಂಸತ್ತಿಗೆ ಬರುತ್ತಿಲ್ಲ: ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.