ನವದೆಹಲಿ:ರಾಷ್ಟ್ರೀಯ ವಾಯು ಶುದ್ಧೀಕರಣ ಕಾರ್ಯಕ್ರಮದ (ಎನ್ಸಿಎಪಿ) ಅಡಿಯಲ್ಲಿ ಮುಂದಿನ ಐದು ವರ್ಷಗಳಿಗೆ ಇರಿಸಿಕೊಳ್ಳಲಾಗಿರುವಗುರಿ ಈಡೇರಿದರೆ, ದೆಹಲಿಯಲ್ಲಿ ವಾಸಿಸುತ್ತಿರುವವರ ಜೀವಿತಾವಧಿ 3 ವರ್ಷಗಳಷ್ಟು ಹೆಚ್ಚುವ ಸಾಧ್ಯತೆ ಇದೆಯಂತೆ. ಹೊಸ ಅಧ್ಯಯನವೊಂದು ಈ ವಿಷಯ ತಿಳಿಸಿದೆ.

ಅತಿ ಹೆಚ್ಚು ವಾಯುಮಾಲಿನ್ಯಗೊಂಡಿರುವ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಶೇ 20ರಿಂದ 30ರಷ್ಟು ಸುಧಾರಿಸುವುದು ಎನ್ಸಿಎಪಿ ಗುರಿ. 2017 ಆರಂಭಿಕ ವರ್ಷ ಎಂದು ಪರಿಗಣಿಸಿಮುಂದಿನ ಐದು ವರ್ಷಗಳಲ್ಲಿ ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಅವರು ಇದೇ 10ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ದೇಶದ 102 ನಗರಗಳಲ್ಲಿವಾಯುಮಾಲಿನ್ಯ ಪ್ರಮಾಣ ಅತಿ ಹೆಚ್ಚಾಗಿದ್ದು, ಇದು ದೇಶದ ಸರಾಸರಿ ವಾಯುಮಾಲಿನ್ಯ ಪ್ರಮಾಣವನ್ನೂ ಮೀರಿದೆ ಎಂದುಎನ್ಸಿಎಪಿ ಗುರುತಿಸಿದೆ.

ಇವುಗಳಲ್ಲಿದೆಹಲಿ, ಉತ್ತರ ಪ್ರದೇಶದ 13, ಬಿಹಾರದ 2 ನಗರಗಳಲ್ಲಿ ಶೇ 25ರಷ್ಟು ವಾಯುಮಾಲಿನ್ಯ ಕಡಿಮೆಯಾದರೆ, ಜನರ ಜೀವಿತಾವಧಿ 2–3 ವರ್ಷ ಹೆಚ್ಚಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.