ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ರಾಜ್ಯಗಳಿಂದ ಗೋವುಗಳ ಖರೀದಿ: ಗೋವಾ ಸಿ.ಎಂ ಸಾವಂತ್‌

Last Updated 22 ಡಿಸೆಂಬರ್ 2020, 10:25 IST
ಅಕ್ಷರ ಗಾತ್ರ

ಪಣಜಿ: ರಾಜ್ಯ ಎದುರಿಸುತ್ತಿರುವ ಗೋ ಮಾಂಸದ ಕೊರತೆಯನ್ನು ನಿವಾರಿಸುವ ಸಲುವಾಗಿ ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮಂಗಳವಾರ ಹೇಳಿದ್ದಾರೆ.

ಕರ್ನಾಟಕದಿಂದ ಗೋವಾಕ್ಕೆ ಗರಿಷ್ಠ ಪ್ರಮಾಣದ ಮಾಂಸ ಪೂರೈಕೆಯಾಗುತ್ತದೆ. ಕರ್ನಾಟಕ ಈಗ ಗೋಹತ್ಯೆಯನ್ನು ನಿಷೇಧಿಸಿರುವ ಕಾರಣ ಗೋವಾ ಮಾಂಸದ ಕೊರತೆಯನ್ನು ಎದುರಿಸುತ್ತಿದೆ.

‘ಗೋ ಮಾಂಸವನ್ನು ಪೂರೈಕೆ ಮಾಡುವ ಏಜೆಂಟರು ಬೇಡಿಕೆಗೆ ತಕ್ಕಷ್ಟು ಮಾಂಸ ಖರೀದಿಸಲು ವಿಫಲರಾದರೆ, ಅವರು ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಬಹುದು. ಅವುಗಳನ್ನು ಗೋವಾ ಮೀಟ್‌ ಕಾಂಪ್ಲೆಕ್ಸ್‌ ಲಿ. (ಜಿಎಂಸಿಎಲ್‌)ನಲ್ಲಿ ವಧೆ ಮಾಡಬಹುದು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿ ತಿಳಿಸಿದರು.

ಜಿಎಂಸಿಎಲ್‌ನ ಕಸಾಯಿಖಾನೆ ಪಣಜಿಯಿಂದ 45 ಕಿ.ಮೀ. ದೂರದಲ್ಲಿನ ಉಸ್ಗಾಂವ್‌ ಗ್ರಾಮದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT