ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಪ್‌’ ತಂತ್ರಜ್ಞಾನದಿಂದ ಯಕೃತ್ತಿನ ಕಸಿ ಯಶಸ್ವಿ

Last Updated 25 ಜೂನ್ 2021, 16:09 IST
ಅಕ್ಷರ ಗಾತ್ರ

ಚೆನ್ನೈ: ರೋಗದ ಅಂತಿಮ ಹಂತ ತಲುಪಿದ್ದ ಪಿತ್ತಜನಕಾಂಗದ ರೋಗಿಗೆ ಹೈಪೊಥೆರೆಮಿಕ್‌ ಆಕ್ಸಿಜನೇಟೆಡ್‌ ಪರ್ಫ್ಯೂಷನ್ (ಎಚ್‌ಒಪಿಇ) ಪಂಪ್‌ನೊಂದಿಗೆ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು ದೇಶದಲ್ಲೇ ಪ್ರಥಮ ಎಂದು ಇಲ್ಲಿನ ಕಾರ್ಪೊರೇಟ್ ಆಸ್ಪತ್ರೆ ಶುಕ್ರವಾರ ತಿಳಿಸಿದೆ.

ಅಂತಿಮ ಹಂತದ ಪಿತ್ತಜನಕಾಂಗದ ಕಾಯಿಲೆ ಇರುವ 44 ವರ್ಷದ ವ್ಯಕ್ತಿ ಯಕೃತ್ತಿನ ಅಂಗಕ್ಕಾಗಿ ಎರಡೂವರೆ ವರ್ಷಗಳಿಂದ ಕಾಯುತ್ತಿದ್ದರು. ಈ ರೋಗಿಯು ಅಪರೂಪದ ಎಬಿ ರಕ್ತ ಗುಂಪನ್ನು ಹೊಂದಿದ್ದು, ಇದು ಪಿತ್ತಜನಕಾಂಗ ಪಡೆಯುವಲ್ಲಿ ಕಷ್ಟಕರವಾಗಿತ್ತು ಎಂದು ಎಂಜಿಎಂ ಹೆಲ್ತ್‌ಕೇರ್‌ನಲ್ಲಿ ಯಕೃತ್ತಿನ ಕಾಯಿಲೆಗಳು ಮತ್ತು ಕಸಿ ಮಾಡುವಿಕೆಯ ಸಂಸ್ಥೆಯ ನಿರ್ದೇಶಕ ಡಾ. ತ್ಯಾಗರಾಜನ್ ಶ್ರೀನಿವಾಸನ್ ತಿಳಿಸಿದರು.

ಆದಾಗ್ಯೂ, ಸುಮಾರು ಮೂರು ತಿಂಗಳ ಹಿಂದೆ, ಒಂದು ಕ್ಯಾಡವೆರಿಕ್ ಯಕೃತ್ತು ಲಭ್ಯವಿತ್ತು. ಆದರೆ ಮೆದುಳು ನಿಷ್ಕ್ರಿಯವಾಗಿದ್ದ ದಾನಿಗೆ ಅಧಿಕ ಪ್ರಮಾಣದ ರಕ್ತದೊತ್ತಡಕ್ಕೆ ಪೂರಕವಾದ ಔಷಧಿಗಳನ್ನು ನೀಡಲಾಯಿತು, ಆದರೆ, ಅದು ಅಸ್ಥಿರವಾಗಿತ್ತು ಎಂದು ಡಾ. ತ್ಯಾಗರಾಜನ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರಕರಣದ ಸಂಕೀರ್ಣತೆ ಮತ್ತು ದಾನಿ ಯಕೃತ್ತಿನ ಸ್ಥಿತಿಯ ಕಾರಣದಿಂದಾಗಿ ಹೋಪ್ ಪಂಪ್ ಬಳಸಲು ನಿರ್ಧರಿಸಲಾಯಿತು. ಸ್ವೀಕರಿಸುವವರ ಕುಟುಂಬಕ್ಕೆ ದಾನಿಯ ಯಕೃತ್ತು ಮಸುಕಾಗಿದೆ ಮತ್ತು ಬಯಾಪ್ಸಿಯಲ್ಲಿ ಶೇ 40ರಷ್ಟು ಹೆಚ್ಚಿನ ಕೊಬ್ಬಿನಂಶವಿದೆ ಎನ್ನುವುದನ್ನು ತಿಳಿಸಲಾಯಿತು. ರೋಗಿಗೆ ಯಕೃತ್ತನ್ನು ಕಸಿ ಮಾಡಲು ದಾನಿಯ ಯಕೃತ್ತಿನ ಮೇಲೆ ಮೆಷಿನ್‌ ಪಂಪ್ ಬಳಸಿದೆವು’ ಎಂದು ಅವರು ತಿಳಿಸಿದರು.

‘ಹೋಪ್ ಮೆಷಿನ್ ಪಂಪ್‌ನಿಂದ ಯಕೃತ್ತಿನ ಗುಣಮಟ್ಟ ಸರಿಪಡಿಸಲು ಮತ್ತು ಸುಧಾರಿಸಲು ಸಹಾಯವಾಯಿತು. ಈ ಪ್ರಕ್ರಿಯೆ ಕೂಡ ಕಡಿಮೆ ವೆಚ್ಚದಲ್ಲಿ ಆಗುವಂತದ್ದು. ನವೀನ ಮತ್ತು ಕ್ರಾಂತಿಕಾರಕ ತಂತ್ರಜ್ಞಾನವೂ ಆಗಿದೆ. ಇದರಿಂದ ಅಂಗಾಂಗ ಕೊರತೆ ನಿವಾರಿಸಬಹುದಾಗಿದೆ’ ಎಂದು ಅವರು ಹೇಳಿದರು.

ಕೋವಿಡ್‌ 19 ದೇಶದಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದ್ದು, ಶವಗಳ ಅಂಗಾಂಗಗಳ ತೀವ್ರ ಕೊರತೆ ಉಂಟುಮಾಡಿದೆ. ಇದರ ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ರೋಗಿಗಳು ದೀರ್ಘಾವಧಿಯವರೆಗೆ ಸರದಿಯಲ್ಲಿ ಕಾಯುವಂತಾಗಿದೆ ಎಂದು ಎಂಜಿಎಂ ಹೆಲ್ತ್‌ಕೇರ್‌ನ ಪಿತ್ತಜನಕಾಂಗದ ಕಾಯಿಲೆಗಳು ಮತ್ತು ಕಸಿ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ. ಕಾರ್ತಿಕ್ ಮಥಿವಾನನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT