ನವದೆಹಲಿ (ಪಿಟಿಐ): ಬಾಂಗ್ಲಾದೇಶದೊಡನೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಲು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

1971ರಲ್ಲಿ ಹೊಸದಾಗಿ ರೂಪುಗೊಂಡ ಬಾಂಗ್ಲಾದೇಶವನ್ನು ಗುರುತಿಸಿದ ಸಲುವಾಗಿ ಡಿಸೆಂಬರ್ 6 ರಂದು ಮೈತ್ರಿ ದಿವಸ ಆಚರಿಸಲಾಗುತ್ತದೆ.

‘ಭಾರತ ಮತ್ತು ಬಾಂಗ್ಲಾದೇಶ ಈ ದಿನವನ್ನು ಮೈತ್ರಿ ದಿವಸವಾಗಿ ಸ್ಮರಿಸುತ್ತವೆ. ನಾವು ಜಂಟಿಯಾಗಿ ನಮ್ಮ 50 ವರ್ಷಗಳ ಸ್ನೇಹವನ್ನು ಸ್ಮರಿಸುತ್ತೇವೆ ಮತ್ತು ಆಚರಿಸುತ್ತೇವೆ’ ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ.

‘ಸ್ವತಂತ್ರ, ಸಾರ್ವಭೌಮ ರಾಷ್ಟ್ರವಾಗಿ ಬಾಂಗ್ಲಾದೇಶವನ್ನು ಭಾರತ ಗುರುತಿಸಿ ಇಂದಿಗೆ 50 ವರ್ಷಗಳಾಗಿವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

1971ರ ಡಿಸೆಂಬರ್ 6 ರಂದು ಬಾಂಗ್ಲಾದೇಶದೊಡನೆ ರಾಜತಾಂತ್ರಿಕ ಬಾಂಧವ್ಯವನ್ನು ಹೊಂದಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಬಾಗ್ಚಿ ಹೇಳಿದರು.

ಕಳೆದ ಮಾರ್ಚ್ನಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ದಿನದ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜತಾಂತ್ರಿಕ ಬಾಂಧವ್ಯವನ್ನು ಹೊಂದಿದ ದಿನವನ್ನು ಮೈತ್ರಿ ದಿವಸವಾಗಿ ಆಚರಿಸಲು ನಿರ್ಧರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.