ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಢ: ನವೀನ್‌ ಜಿಂದಾಲ್‌ ನಾಮಪತ್ರ ಸಲ್ಲಿಕೆ

Published 2 ಮೇ 2024, 13:44 IST
Last Updated 2 ಮೇ 2024, 13:44 IST
ಅಕ್ಷರ ಗಾತ್ರ

ಚಂಡೀಗಢ: ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಉದ್ಯಮಿ ನವೀನ್‌ ಜಿಂದಾಲ್‌ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. 

ಹರಿಯಾಣ ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ಅವರು ಈ ವೇಳೆ ಜತೆಗಿದ್ದರು. ಕಾಂಗ್ರೆಸ್‌ನಲ್ಲಿದ್ದ ಜಿಂದಾಲ್‌, ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು. ಅವರು 2004–2014ರ ಅವಧಿಯಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ಸಂಸದರಾಗಿದ್ದರು.

ಜಿಂದಾಲ್‌ ಅವರು ಈ ಬಾರಿ ಐಎನ್‌ಎಲ್‌ಡಿಯ ಹಿರಿಯ ನಾಯಕ ಅಭಯ್‌ ಸಿಂಗ್‌ ಚೌಟಾಲಾ ಮತ್ತು ಎಎಪಿಯ ಸುಶೀಲ್‌ ಗುಪ್ತಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಸಂಬಲ್‌ಪುರ (ಒಡಿಶಾ) ವರದಿ: ಬಿಜೆಪಿಯ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್‌ ಅವರು ಒಡಿಶಾದ ಸಂಬಲ್‌ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. 

ಒಮರ್‌ ಅಬ್ದುಲ್ಲಾ ನಾಮಪತ್ರ (ಶ್ರೀನಗರ ವರದಿ): ನ್ಯಾಷನಲ್‌ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದರು. 

‍ಒಮರ್‌ ಅವರು ಪೀಪಲ್ಸ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಸಜ್ಜಾದ್‌ ಲೋನ್‌ ಮತ್ತು ಪಿಡಿಪಿಯ ಮೀರ್‌ ಫಯಾಜ್ ಅವರ ಸವಾಲು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT