ಉಮರಿಯಾ, ಮಧ್ಯಪ್ರದೇಶ: ಉಮರಿಯಾ ಜಿಲ್ಲೆಯ ಗಿಂಜ್ರಿ ಗ್ರಾಮದಲ್ಲಿ ಹಸುವೊಂದಕ್ಕೆ ಸ್ಫೋಟ ಮಿಶ್ರಿತ ಆಹಾರ ನೀಡಲಾಗಿದ್ದು, ಸ್ಫೋಟದಿಂದಾಗಿ ಅದರ ಬಾಯೊಳಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.

ಗ್ರಾಮದ ಓಂ ಪ್ರಕಾಶ್ ಅಗ್ರವಾಲ್ ಅವರಿಗೆ ಸೇರಿದ ಹಸು ಗಾಯಗೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಮನೆಯ ಸುತ್ತಮುತ್ತ ಮೇಯುತ್ತಿದ್ದ ಹಸು, ಜೂನ್ 14ರಂದು ಮನೆಗೆ ಬರಲಿಲ್ಲ. ಕೊನೆಗೆ ಮಂಗಳವಾರ ಪತ್ತೆಯಾಯಿತು. ಅದರ ದವಡೆಯಲ್ಲಿ ಗಾಯ ಕಂಡು ಬಂತು. ಸ್ಫೋಟಕ ಬೆರೆಸಿದ ಆಹಾರ ನೀಡಲಾಗಿತ್ತು, ಹೀಗಾಗಿ ಅದರ ಬಾಯಲ್ಲಿ ಗಾಯಗಳಾಗಿವೆ’ ಎಂದು ಓಂ ಪ್ರಕಾಶ್ ಹೇಳಿದ್ದಾರೆ.

‘ಹಸು ಈಗ ಏನನ್ನೂ ತಿನ್ನುವ ಸ್ಥಿತಿಯಲ್ಲಿ ಇಲ್ಲ. ಒಂದು ತಿಂಗಳಿನ ತನ್ನ ಕರುವಿಗೂ ಹಾಲು ಕುಡಿಸಲೂ ಅದಕ್ಕೆ ಆಗುತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

‘ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಲು ವಿಫಲರಾದರೆ, ನಾವೇ ಅವರನ್ನು ಪತ್ತೆ ಹಚ್ಚುತ್ತೇವೆ’ ಎಂದು ಬಜರಂಗ ದಳದ ಮುಖಂಡ ಉಪೇಂದ್ರ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.