ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯ ಬಂಧನ: 15 ದಿನ ನ್ಯಾಯಾಂಗ ವಶಕ್ಕೆ

Published 17 ಜೂನ್ 2023, 11:10 IST
Last Updated 17 ಜೂನ್ 2023, 11:10 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ. ಸೂರ್ಯ ಅವರನ್ನು ಮದುರೈ ಜಿಲ್ಲೆಯ ಸೈಬರ್‌ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, 15 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮದುರೈನ ಸಿಪಿಐ(ಎಂ) ಸಂಸದ ಎಸ್‌.ವೆಂಕಟೇಶನ್‌ ಅವರ ಬಗ್ಗೆ ಮಾಡಿದ್ದ ಟ್ವೀಟ್‌ ವಿಚಾರಕ್ಕೆ ಸಂಬಂಧಿಸಿ ಸೂರ್ಯ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎಸ್.ಜಿ. ಸೂರ್ಯ ಬಂಧನ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, 'ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ. ಸೂರ್ಯ ಅವರನ್ನು ಬಂಧಿಸಿರುವುದು ತೀವ್ರ ಖಂಡನೀಯ. ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಮ್ಯುನಿಸ್ಟ್‌ ಪಕ್ಷದ ಇಬ್ಬಗೆಯ ನೀತಿಯನ್ನು ಬಯಲು ಮಾಡಿದ್ದೇ ಸೂರ್ಯ ಮಾಡಿದ ಏಕೈಕ ತಪ್ಪು. ಈ ರೀತಿಯ ಬಂಧನಗಳಿಂದ ನಮ್ಮನ್ನು ತಡೆಯಲಾಗದು. ಇಂತಹ ಕಹಿ ಸತ್ಯಗಳನ್ನು ಹೇಳುವುದನ್ನು ಮುಂದುವರಿಸುತ್ತೇವೆ' ಎಂದಿದ್ದಾರೆ.

ಎಸ್.ಜಿ. ಸೂರ್ಯ ಅವರ ಟ್ವೀಟ್‌ನಲ್ಲಿ ಒಂದೇ ಒಂದು ಪದವೂ ಆಕ್ಷೇಪಾರ್ಹವಾಗಿಲ್ಲ. ಮ್ಯಾನ್‌ ಹೋಲ್‌ ಸ್ವಚ್ಛಗೊಳಿಸುವವರ (ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು) ಸಾವಿನಲ್ಲಿ ತಮಿಳುನಾಡು ನಂಬರ್ 1 ಸ್ಥಾನದಲ್ಲಿದೆ. ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಪೊಲೀಸರಿಗೆ ಪರಿಜ್ಞಾನವೇ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT