ಮುಂಬೈ: ‘ಮಹಾರಾಷ್ಟ್ರವು ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಿದೆ’ ಎಂದು ಶಿವಸೇನಾ ಪಕ್ಷವು ಮಂಗಳವಾರ ಹೇಳಿದೆ.

‘ಮಹಾರಾಷ್ಟ್ರ, ದೇಶ ಮತ್ತು ಜಗತ್ತಿಗೆ ಬಿಕ್ಕಟ್ಟುಗಳು ಹೊಸತೇನಲ್ಲ. ಮಹಾರಾಷ್ಟ್ರವು ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ನಿಯಂತ್ರಿಸಿದೆ. ಕಳೆದ ವರ್ಷ ಚಂಡಮಾರುತವನ್ನು ಎದುರಿಸಿದೆ. ಈಗ ‘ತೌತೆ’ ಚಂಡಮಾರುತದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ಮಾರ್ಗವನ್ನು ಕಂಡುಹಿಡಿಯಲಿದೆ’ ಎಂದು ಶಿವಸೇನಾದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಸೋಮವಾರ 26,616 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 54,05,068ಕ್ಕೆ ಏರಿಕೆಯಾಗಿದೆ. ಇದೇ ವೇಳೆ 516 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆಯು 82,486ಕ್ಕೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.