ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ‘ಇಂಡಿಯಾ’ ಸಭೆ ವೇಳೆಯೇ ಎನ್‌ಡಿಎ ಸಭೆ ಆಯೋಜನೆ

Published 29 ಆಗಸ್ಟ್ 2023, 14:35 IST
Last Updated 29 ಆಗಸ್ಟ್ 2023, 14:35 IST
ಅಕ್ಷರ ಗಾತ್ರ

ಮುಂಬೈ: ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ತನ್ನ ಮಹತ್ವದ ಸಭೆಯನ್ನು ಆಗಸ್ಟ್‌ 31 ಮತ್ತು ಸೆಪ್ಟೆಂಬರ್‌ 1ರಂದು ಆಯೋಜಿಸಿರುವ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವೂ ಅದೇ ಸಮಯದಲ್ಲಿ ಸಭೆಯನ್ನು ನಿಗದಿಪಡಿಸಿದೆ.

ಮಹಾರಾಷ್ಟ್ರದಲ್ಲಿ 10 ರಾಜಕೀಯ ಪಕ್ಷಗಳನ್ನು ಒಳಗೊಂಡಿರುವ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ‘ಮಹಾಯುತಿ’ ಎಂದು ಹೆಸರಿಡಲಾಗಿದೆ. ಮಹಾಯುತಿಯ ಅನೌಪಚಾರಿಕ ಸಭೆಯು ಆಗಸ್ಟ್‌ 31ರಿಂದ ಆರಂಭವಾಗಲಿದ್ದು, ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್‌ ಹಾಗೂ ಅಜಿತ್ ಪವಾರ್‌ ಅವರು ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ಸೆಪ್ಟೆಂಬರ್‌ 1ರಂದು ಪ್ರಾದೇಶಿಕವಾರು ಸಭೆ ನಡೆಯಲಿದೆ. ಅದರಂತೆ ಮುಂಬೈ– ಕೊಂಕಣ, ವಿದರ್ಭ, ಮರಾಠವಾಡ, ಪೂರ್ವ ಮಹಾರಾಷ್ಟ್ರ ಮತ್ತು ಉತ್ತರ ಮಹಾರಾಷ್ಟ್ರ ಪ್ರದೇಶಗಳಲ್ಲಿ ಸಭೆ ನಡೆಯಲಿದೆ.

2024ರಲ್ಲಿ ಲೋಕಸಭೆ ಚುನಾವಣೆ ಜೊತೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT