ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಗೆ ಗುದ್ದಿ, ಬಾನೆಟ್‌ನಲ್ಲಿ ಎಳೆದುಕೊಂಡು ಹೋದ ಮಿನಿ ಬಸ್

Published 18 ಡಿಸೆಂಬರ್ 2023, 7:47 IST
Last Updated 18 ಡಿಸೆಂಬರ್ 2023, 7:47 IST
ಅಕ್ಷರ ಗಾತ್ರ

ನವದೆಹಲಿ: ವ್ಯಕ್ತಿಯೊಬ್ಬನಿಗೆ ಗುದ್ದಿದ ಮಿನಿ ಬಸ್‌, ಬಾನೆಟ್‌ ಮೇಲೆ ಬಿದ್ದಿದ್ದ ಆತನನ್ನು ತುಸು ದೂರ ಎಳೆದುಕೊಂಡು ಹೋದ ಘಟನೆ ದಕ್ಷಿಣ ದೆಹಲಿಯ ಲಜ್‌ಪತ್‌ನಗರ ‍ಪ್ರದೇಶದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅದರಲ್ಲಿ ಮಿನಿಬಸ್‌ನ ಬಾನೆಟ್‌ನಲ್ಲಿ ವ್ಯಕ್ತಿಯೊಬ್ಬ ನಿಂತಿರುವುದು ದಾಖಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಬಾನೆಟ್‌ನಿಂದ ಇಳಿಯುವ ದೃಶ್ಯಗಳಿವೆ.

ಈ ಬಗ್ಗೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಡಿಎನ್‌ಡಿ ಮೇಲ್ಸೇತುವೆ ಮೂಲಕ ನೋಯ್ಡಾಗೆ ತೆರಳುವ ವೇಳೆ ಘಟನೆ ನಡೆದಿದ್ದಾಗಿ ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಲಜ್‌ಪತ್‌ನಗರದಲ್ಲಿ ಮಿನಿಬಸ್‌ ವ್ಯಕ್ತಿಗೆ ಗುದ್ದಿದ್ದು, ತುಸು ದೂರು ಎಳೆದುಕೊಂಡು ಹೋಗಿದೆ.

ಕರೆ ಮಾಡಿದ ವ್ಯಕ್ತಿ ಮಿನಿಬಸ್‌ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯ ಆಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಳಿಕ ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದಾಗ, ತಾನು ಉತ್ತರ ಪ್ರದೇಶದಲ್ಲಿರುವುದಾಗಿಯೂ, ದೆಹಲಿಗೆ ಬರಲು ಅಸಾಧ್ಯ ಎಂದು ಹೇಳಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ.

ದೆಹಲಿಗೆ ಬರುವಂತೆ ಅವರ ಮನವೊಲಿಸಲಾಗುತ್ತಿದ್ದು, ಬಳಿಕ ದೂರು ಪಡೆದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT