ಗ್ಯಾಂಗ್ಟಕ್: ಪೂರ್ವ ಸಿಕ್ಕಿಂನಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದ್ದು, ತೀಸ್ತಾ ನದಿ ಬಳಿ ನಿರ್ಮಿಸಿರುವ 510 ಮೆಗಾವಾಟ್ ಜಲವಿದ್ಯುತ್ ಯೋಜನೆಯ ಸ್ಥಾವರದ ಭಾಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಗ್ಟಾಮ್ ಬಳಿಯ ದೀಪು ದಾರಾದಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿತು. ಎನ್‌ಎಚ್‌ಪಿಸಿಯ ತೀಸ್ತಾ 5ನೇ ಹಂತದ ಜಲವಿದ್ಯುತ್ ಯೋಜನೆಯ ಪವರ್‌ಹೌಸ್‌ಗೆ ಗಂಭೀರ ಹಾನಿ ಉಂಟಾಗಿದೆ ಎಂದು ಅವರು ಹೇಳಿದರು.
ಭೂಕುಸಿತದಿಂದ ಸುಮಾರು 17ರಿಂದ 18 ಮನೆಗಳೂ ಹಾನಿಗೀಡಾಗಿವೆ. ಸಂತ್ರಸ್ತ ಕುಟುಂಬಗಳನ್ನು ಎನ್‌ಎಚ್‌ಪಿಸಿ ಕ್ವಾರ್ಟರ್ಸ್‌ಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.