ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಮೆಗಾ ಜವಳಿ ಪಾರ್ಕ್‌: ಪ್ರಧಾನಿ

Last Updated 17 ಮಾರ್ಚ್ 2023, 14:22 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ‘ಪ್ರಧಾನಮಂತ್ರಿ ಮಿತ್ರಾ ಮೆಗಾ ಜವಳಿ ಪಾರ್ಕ್‌’ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಜವಳಿ ಪಾರ್ಕ್‌ ಸ್ಥಾಪನೆಯಾಗಲಿರುವ ಇತರ ರಾಜ್ಯಗಳು.

‘ಈ ಜವಳಿ ಪಾರ್ಕ್‌ಗಳು ಹೂಡಿಕೆಯನ್ನು ಆಕರ್ಷಿಸುವ ಜೊತೆಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಇದು ‘ಮೇಕ್‌ ಇನ್‌ ಇಂಡಿಯಾ’ ಮತ್ತು ಮೇಕ್‌ ಫಾರ್‌ ವರ್ಲ್ಡ್’ ದೂರದೃಷ್ಟಿಗೆ ಅತ್ಯುತ್ತಮ ಉದಾಹರಣೆ. ಇದರಿಂದ ಜವಳಿ ಉದ್ಯಮಕ್ಕೆ ಉತ್ತೇಜನ ದೊರಕಲಿದೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಜವಳಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಜೊತೆಗೆ ಸ್ಥಳೀಯ ಉದ್ಯಮಗಳಿಗೂ ನೆರವಾಗಲಿದೆ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಅವರ ‘ಆತ್ಮ ನಿರ್ಭರ ಭಾರತ’ ದೂರದೃಷ್ಟಿಯ ಕನಸನ್ನು ಸಾಕಾರಗೊಳಿಸಲು ಮತ್ತು ಜಾಗತಿಕ ಜವಳಿ ಕ್ಷೇತ್ರದ ನಕ್ಷೆಯಲ್ಲಿ ಭಾರತವನ್ನು ಬಲವಾಗಿ ಪ್ರತಿನಿಧಿಸುವ ಗುರಿ ಹೊಂದಿದೆ’ ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಮೆಗಾ ಜವಳಿ ಪಾರ್ಕ್‌ ಸ್ಥಾಪಿಸುವಂತೆ ಬೊಮ್ಮಾಯಿ ಅವರು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಪ್ರಧಾನಿ ಅವರ ದೂರದೃಷ್ಟಿಯಾದ ‘ಆತ್ಮನಿರ್ಭರ ಭಾರತವನ್ನು’ ನಿರ್ಮಿಸಲು ಮತ್ತು ಜಾಗತಿಕ ಜವಳಿ ಕ್ಷೇತ್ರದಲ್ಲಿ ಭಾರತ ಸ್ಥಾನವನ್ನು ದೃಢವಾಗಿ ಸ್ಥಾಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT