ನವದೆಹಲಿ/ ಪ್ಯಾರಿಸ್: ಲೇಸರ್ಗಳ ಮೂಲಕ ಗಾಜಿನ ಫಲಕದ ಮೇಲೆ ಬರೆಯಲಾದ ದತ್ತಾಂಶಗಳನ್ನು 10 ಸಾವಿರ ವರ್ಷಗಳಿಗೂ ಅಧಿಕ ಕಾಲ ಸಂರಕ್ಷಿಸಿಡಲು ಸಾಧ್ಯ ಎಂದು ಮೈಕ್ರೋಸಾಫ್ಟ್ ಕಂಪನಿಯ ಸಂಶೋಧಕರು ತಿಳಿಸಿದ್ದಾರೆ.

ಈ ತಂತ್ರಜ್ಞಾನವು ಕಾನೂನು, ವೈಯಕ್ತಿಕ ಮತ್ತು ಇತರೆ ವಾಣಿಜ್ಯ ದತ್ತಾಂಶಗಳ ದೀರ್ಘಾವಧಿಯ ಸಂಗ್ರಹಣೆಗೆ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ನಡೆಸಿದ ಬ್ರಿಟನ್ನ ಕೇಂಬ್ರಿಜ್ನಲ್ಲಿರುವ ಮೈಕ್ರೋಸಾಫ್ಟ್ ರಿಸರ್ಚ್ ಸೆಂಟರ್ನ ‘ಪ್ರಾಜೆಕ್ಟ್ ಸಿಲಿಕಾ’ ತಂಡ ಹೇಳಿದೆ.

ತಾನು ಅಭಿವೃದ್ಧಿಪಡಿಸಿದ ಹೊಸ ದತ್ತಾಂಶ ಸಂಗ್ರಹಣಾ ವ್ಯವಸ್ಥೆಗೆ ‘ಸಿಲಿಕಾ’ ಎಂದು ಹೆಸರಿಟ್ಟಿದೆ. ಈ ಅಧ್ಯಯನ ವರದಿ ‘ನೇಚರ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ದತ್ತಾಂಶಗಳನ್ನು ಸಂಗ್ರಹಿಸಲು ಈಗ ಬಳಕೆಯಲ್ಲಿರುವ ಮ್ಯಾಗ್ನೆಟಿಕ್ ಟೇಪ್ಗಳು ಅಥವಾ ಹಾರ್ಡ್ ಡಿಸ್ಕ್ ಡ್ರೈವ್ಗಳು ದೀರ್ಘಾವಧಿಯ ಸಂರಕ್ಷಣೆಗೆ ಸೂಕ್ತವಲ್ಲ. ಕೆಲವು ವರ್ಷಗಳು ಅಥವಾ ದಶಕಗಳ ನಂತರ ದತ್ತಾಂಶಗಳು ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ.

ಆದರೆ ‘ಮಲ್ಟಿಬೀಮ್ ಫೆಮ್ಟೊಸೆಕಂಡ್ ಲೇಸರ್’ ಮೂಲಕ ಗಾಜಿನ ಫಲಕದಲ್ಲಿ ಬರೆಯುವ ದತ್ತಾಂಶವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿಡಲು ಸಾಧ್ಯ.

ಗಾಜಿನ ಫಲಕದಲ್ಲಿ ಸಂಗ್ರಹ ಹೇಗೆ?

ಆರಂಭದಲ್ಲಿ ದತ್ತಾಂಶಗಳನ್ನು ಸಂಕೇತಗಳಾಗಿ ಪರಿವರ್ತಿಸಲಾಗುತ್ತದೆ. ‘ವೋಕ್ಸೆಲ್’ ಎಂದು ಕರೆಯಲ್ಪಡುವ ಈ ಸಂಕೇತ ಮೂರು ಆಯಾಮದ ಪಿಕ್ಸೆಲ್ಗಳನ್ನು ಹೋಲುತ್ತದೆ.

ಆ ಬಳಿಕ ಲೇಸರ್ಗಳ ಮೂಲಕ ವೋಕ್ಸೆಲ್ಗಳನ್ನು ಸಿ.ಡಿ ಗಾತ್ರದ ಗಾಜಿನ ಫಲಕದ ಮೇಲೆ ಹಲವು ಪದರಗಳಲ್ಲಿ ಬರೆಯಲಾಗುತ್ತದೆ. ಇಲ್ಲಿ ಸಂಗ್ರಹವಾದ ಮಾಹಿತಿಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಲ್ಗಾರಿದಂ ಬಳಸಿ ಡಿಕೋಡ್ ಮಾಡಬಹುದು ಎಂದು ಅಧ್ಯಯನ ವರದಿ ತಿಳಿಸಿದೆ.

ಸಿ.ಡಿ ಗಾತ್ರದಲ್ಲಿರುವ ಒಂದು ಗಾಜಿನ ಫಲಕದಲ್ಲಿ 20 ಲಕ್ಷದಷ್ಟು ಪುಸ್ತಕಗಳು ಅಥವಾ 5 ಸಾವಿರದಷ್ಟು ಅಲ್ಟ್ರಾ ಹೈ ಡೆಫಿನಿಷನ್ 4ಕೆ ಸಿನಿಮಾಗಳನ್ನು ಸಂಗ್ರಹಿಸಿಡಬಹುದು ಎಂದು ಚೀನಾದ ಶಾಂಗ್ಡಾಂಗ್ ವಿ.ವಿಯ ಸಂಶೋಧಕರಾದ ಫೆಂಗ್ ಚೆನ್ ಮತ್ತು ಬೊ ವು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.