ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಖಂಡಿಸಿ ಪ್ರತಿಭಟನೆ: 65 ಕಿ.ಮೀ ಓಡಿ ಆಸ್ಪತ್ರೆ ಸೇರಿದ ಇನ್ಸ್‌ಪೆಕ್ಟರ್‌ 

Last Updated 16 ನವೆಂಬರ್ 2019, 2:20 IST
ಅಕ್ಷರ ಗಾತ್ರ

ಈಟ್ವಾ (ಉತ್ತರ ಪ್ರದೇಶ): ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರನ್ನು65 ಕಿ.ಮೀಟರ್‌ ದೂರದ ಠಾಣೆಯೊಂದಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿ ಅವರು ಆ ಠಾಣೆಗೆ ಜಾಗಿಂಗ್‌ ಮೂಲಕವೇ ಹೋಗಿ ಸುಸ್ತಾಗಿ ಆಸ್ಪತ್ರೆ ಸೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಪೊಲೀಸ್‌ ಲೈನ್‌ ಠಾಣೆಯಿಂದ ಸಬ್‌ ಇನ್ಸ್‌ಪೆಕ್ಟರ್‌ ವಿಜಯ್‌ ಪ್ರತಾಪರನ್ನು 65 ಕಿ.ಮೀ ದೂರ ಇರುವ ಬಿಥುಲಿ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಥುಲಿಗೆ ಬರಿಗಾಲಿನಲ್ಲೇ ಓಡಿದ್ದರು. ಇದರಿಂದ ತೀವ್ರವಾಗಿ ಬಳಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ವಿಜಯ್‌ ಪ್ರತಾಪ್‌ ಅವರು ವರ್ಗಾವಣೆ ಬೇಡ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಅಧಿಕಾರಿಗಳು ವರ್ಗಾವಣೆಯನ್ನು ತಡೆಹಿಡಿದಿದ್ದರು. ಆದರೂ ಸ್ಥಳೀಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಬಲವಂತವಾಗಿ ವರ್ಗಾವಣೆ ಮಾಡಿದ್ದರು ಎಂದು ವಿಜಯ್‌ ಪ್ರತಾಪ್‌ ಆರೋಪಿಸಿದ್ದಾರೆ.

ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಕಾಲ್ನಡಿಗೆಯ ಪ್ರತಿಭಟನೆ ಮಾಡಿದ್ದೇನೆ ಎಂದು ವಿಜಯ ಪ್ರತಾಪ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT