ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಬಾಲಕಿಯನ್ನು ಬಾವಿಗೆ ಎಸೆದು ಕೊಂದ ಅಜ್ಜಿ

ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ನೊನ್ರಾ ಎಂಬ ಹಳ್ಳಿಯಲ್ಲಿ ಶನಿವಾರ ನಡೆದಿದೆ
Published 20 ಜನವರಿ 2024, 13:26 IST
Last Updated 20 ಜನವರಿ 2024, 13:26 IST
ಅಕ್ಷರ ಗಾತ್ರ

ಸುಲ್ತಾನ್‌ಪುರ: 10 ವರ್ಷದ ಮೊಮ್ಮಗಳನ್ನು ಆಕೆಯ ಅಜ್ಜಿಯೇ ಬಾವಿಗೆ ಎಸೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ನೊನ್ರಾ ಎಂಬ ಹಳ್ಳಿಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಂತೋಷ್ ನಿಷಾದ್ ಎಂಬುವವರ ಮಗಳು ರಿಯಾ ಎನ್ನುವ ಬಾಲಕಿಯನ್ನು ಆಕೆಯ ಅಜ್ಜಿ ಸುದಾಮ ಬೆಳಗ್ಗೆ ಬಾವಿಗೆ ಎಸೆದಿದ್ದರು. ಸ್ಥಳೀಯರ ಸಹಾಯದಿಂದ ಆಕೆಯನ್ನು ಹೊರತೆಗೆದು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ, ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹದ ಕಾರಣಕ್ಕೆ ಅಜ್ಜಿ ಮೊಮ್ಮಗಳನ್ನು ಕೊಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT