ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಶಾಸ್ತ್ರದಲ್ಲಿ ಮೋದಿ ಅನಕ್ಷರಸ್ಥ: ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಟೀಕೆ

Published 17 ಜೂನ್ 2023, 5:12 IST
Last Updated 17 ಜೂನ್ 2023, 5:12 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.

ಟ್ವಿಟರ್‌ನಲ್ಲಿ ಶನಿವಾರ ಪೋಸ್ಟ್‌ವೊಂದನ್ನು ಪ್ರಕಟಿಸಿರುವ ಸುಬ್ರಮಣಿಯನ್‌ ಸ್ವಾಮಿ, ಹಣಕಾಸು ಇಲಾಖೆ ಮತ್ತು ಪ್ರಧಾನಿ ಮೋದಿಯನ್ನು ಮೂದಲಿಸಿದ್ದಾರೆ.

‘ಭಾರತ ಆರ್ಥಿಕತೆಗೆ ಪ್ರತಿವರ್ಷ ಜಿಡಿಪಿಯ ಶೇ 10ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಇದರ ಮೂಲಕ 10 ವರ್ಷಗಳಲ್ಲಿ ನಿರುದ್ಯೋಗವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ. ಈ ಮೂಲಕ ಬಡತನವನ್ನು ತೊಡೆದುಹಾಕಲು ಶಕ್ತವಾಗಿದೆ. ಆದರೆ ಹಣಕಾಸು ಇಲಾಖೆಗೆ ಇದರ ಸುಳಿವೇ ಇಲ್ಲ. ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರು...’ ಎಂದು ಗೇಲಿ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅರ್ಥಿಕ, ವಿದೇಶಾಂಗ ನೀತಿಗಳು, ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್‌ ಅವರ ವೈಫಲ್ಯಗಳು, ಪೆಟ್ರೋಲ್ ಬೆಲೆ ಏರಿಕೆ, ರಾಮಸೇತು, ಪ್ರಧಾನಿ ಮೋದಿ ವಿದ್ಯಾರ್ಹತೆ ಹೀಗೆ ಹಲವು ವಿಷಯಗಳಲ್ಲಿ ಸುಬ್ರಮಣಿಯನ್‌ ಸ್ವಾಮಿ ನಿರಂತರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಕೇಂದ್ರ ಸರ್ಕಾರದ್ದು ಹಿಜಾಡಾ ವಿದೇಶಾಂಗ ನೀತಿ ಎನ್ನುವ ಮೂಲಕ ಸುಬ್ರಮಣಿಯನ್‌ ಸ್ವಾಮಿ ಅವರು ಹಿಂದೊಮ್ಮೆ ವಿವಾದ ಸೃಷ್ಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT