ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಹಾಗೂ ಮಾಲ್ದೀವ್ಸ್ಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದು, ಬುಧವಾರ ಇಲ್ಲಿಂದ ತೆರಳಿದರು.

ಪ್ರವಾಸ ಆರಂಭಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಉಭಯ ದೇಶಗಳೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳುವ ವಿಶ್ವಾಸವಿದೆ’ ಎಂದಿದ್ದಾರೆ.

‘ಬ್ರಿಟನ್ ಜೊತೆ ಭಾರತ ಸಮಗ್ರ ಪಾಲುದಾರಿಕೆ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಈ ವಿಚಾರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ’ ಎಂದು ಹೇಳಿದ್ದಾರೆ.

‘ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ನಾವೀನ್ಯ, ರಕ್ಷಣಾ ಕ್ಷೇತ್ರ, ಶಿಕ್ಷಣ, ಸಂಶೋಧನೆ, ಸುಸ್ಥಿರತೆ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿ ಎರಡೂ ದೇಶಗಳು ವ್ಯಾಪಕ ಸಹಕಾರ ಹೊಂದಿವೆ’ ಎಂದು ತಿಳಿಸಿದ್ದಾರೆ.

ಬ್ರಿಟನ್ನಲ್ಲಿ ಪ್ರಧಾನಿ ಕಿಯರ್ ಸ್ಟಾರ್ಮರ್, ರಾಜ ಚಾರ್ಲ್ಸ್–3 ಅವರೊಂದಿಗೆ ಮಾತುಕತೆ ನಡೆಸುವರು.

ನಂತರ ಅವರು ಮಾಲ್ದೀವ್ಸ್ಗೆ ತೆರಳಿ, ಅಧ್ಯಕ್ಷ ಮೊಹಮದ್ ಮುಯಿಜು ಅವರೊಂದಿಗೆ ಚರ್ಚೆ ನಡೆಸುವರು. ಮಾಲ್ವೀವ್ಸ್ನ 60ನೇ ಸ್ವಾತಂತ್ರ್ಯೋತ್ಸವದಲ್ಲಿ ಸಹ ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.