ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐ ಸಂಘಟನೆಗೆ ಸೇರಿದ್ದ ವಿವಿಧ ಸ್ಥಳಗಳಲ್ಲಿ ಇ.ಡಿ ತಪಾಸಣೆ

Published 25 ಸೆಪ್ಟೆಂಬರ್ 2023, 13:22 IST
Last Updated 25 ಸೆಪ್ಟೆಂಬರ್ 2023, 13:22 IST
ಅಕ್ಷರ ಗಾತ್ರ

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸೋಮವಾರ ಕೇರಳದ ವಿವಿಧ 12 ಕಡೆ ತಪಾಸಣೆ ನಡೆಸಿದರು.

ವಯನಾಡ್‌, ಕೋಯಿಕ್ಕೊಡ್, ಕೊಚ್ಚಿಯ ವಿವಿಧೆಡೆ ಇರುವ ಸಂಘಟನೆ ಹಾಗೂ ಅದರ ಮಾಜಿ ನಾಯಕರಿಗೆ ಸೇರಿದ ಸ್ಥಳದಲ್ಲಿ ತಪಾಸಣೆ ಕಾರ್ಯ ನಡೆಯಿತು ಎಂದು ಇ.ಡಿ ಮೂಲಗಳು ತಿಳಿಸಿವೆ.

ಕಾನೂನು ಬಾಹಿರ ಚಟುವಟಿಕೆ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ನಿಷೇಧಿಸಿದ್ದು, ಅದರ ಹಲವು ಮುಖಂಡರನ್ನು ಬಂಧಿಸಲಾಗಿತ್ತು.

ಭಯೋತ್ಪಾದಕ ಚಟುವಟಿಕೆ ಆರೋಪಕ್ಕೆ ಪೂರಕವಾಗಿ ಸಂಘಟನೆಯ ಹಣದ ವಹಿವಾಟು ಕುರಿತು ಇ.ಡಿ ತನಿಖೆಯನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT