ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬಾ ಮಾದರಿಯಲ್ಲಿ ಅಯೋಧ್ಯೆಯಲ್ಲಿ ಮಸೀದಿ

ಐಐಸಿಎಫ್‌ ಕಾರ್ಯದರ್ಶಿ ಅಥರ್ ಹುಸೇನ್ ಹೇಳಿಕೆ
Last Updated 20 ಸೆಪ್ಟೆಂಬರ್ 2020, 14:44 IST
ಅಕ್ಷರ ಗಾತ್ರ

ಲಖನೌ: ‘ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯು ಮೆಕ್ಕಾದ ಕಾಬಾ ಷರೀಫ್‌ನಂತೆ ಚೌಕಾಕಾರದಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ’ ಎಂದು ಇಂಡೊ–ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಷನ್‌ನ (ಐಐಸಿಎಫ್‌) ಕಾರ್ಯದರ್ಶಿ ಹಾಗೂ ವಕ್ತಾರ ಅಥರ್ ಹುಸೇನ್ ತಿಳಿಸಿದ್ದಾರೆ.

‘ರಾಮಜನ್ಮ ಭೂಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ನಿರ್ಮಾಣವಾಗಲಿದೆ. ಇದಕ್ಕೆ ಬಾಬರಿ ಮಸೀದಿ ಎಂದಾಗಲೀ ಅಥವಾ ಯಾವುದೇ ರಾಜನ ಹೆಸರನ್ನಾಗಲೀ ಇಡುವುದಿಲ್ಲ. ವೈಯಕ್ತಿಕವಾಗಿ ಹೇಳುವುದಾದರೆ ಜನರು ಇದನ್ನು ಧನ್ನಿಪುರದ ಮಸೀದಿ ಅಂತಲೇ ಕರೆಯಬೇಕು’ ಎಂದು ಅವರು ಹೇಳಿದ್ದಾರೆ.

‘ಧನ್ನಿಪುರ ಗ್ರಾಮದಲ್ಲಿ 15 ಸಾವಿರ ಚದರ ಅಡಿ ಅಳತೆಯಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು. ಈ ಮಸೀದಿಯು ಬಾಬರಿ ಮಸೀದಿಯಷ್ಟೇ ಗಾತ್ರವನ್ನು ಹೊಂದಿರಲಿದೆ. ಆದರೆ, ನೂತನ ಮಸೀದಿಯ ಆಕಾರ ಮಾತ್ರ ಇತರ ಮಸೀದಿಗಳ ಆಕಾರಕ್ಕಿಂತಲೂ ಭಿನ್ನವಾಗಿರಲಿದೆ. ವಾಸ್ತುಶಿಲ್ಪಿ ಎಸ್‌.ಎಂ. ಅಖ್ತರ್ ಅವರ ಸೂಚನೆಯಂತೆ ಇದು ಮೆಕ್ಕಾದ ಕಾಬಾ ಷರೀಫ್‌ನಂತೆ ಚೌಕಾಕಾರ ಹೊಂದಿರಬಹುದು’ ಎಂದು ಅಥರ್ ಹುಸೇನ್ ವಿವರಿಸಿದ್ದಾರೆ.

‘ಮಸೀದಿ ನಿರ್ಮಾಣ ಟ್ರಸ್ಟ್ ಪೋರ್ಟಲ್ ಒಂದನ್ನು ನಿರ್ಮಿಸುತ್ತಿದೆ. ಇದರಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಮುಸ್ಲಿಂ ವಿದ್ವಾಂಸರ ಲೇಖನಗಳೂ ದೊರೆಯಲಿವೆ. ಮಸೀದಿ ಮತ್ತು ಮಸೀದಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ವಸ್ತು ಸಂಗ್ರಹಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಆಸಕ್ತರು ಈ ಪೋರ್ಟಲ್ ಮೂಲಕ ದೇಣಿಗೆ ನೀಡಬಹುದು. ಶೀಘ್ರದಲ್ಲೇ ಪೋರ್ಟಲ್ ಕಾರ್ಯಗಳು ಪೂರ್ಣಗೊಳ್ಳಲಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT