ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕಮಹೇಂದ್ರ ಸಿಂಗ್ ಧೋನಿ(38) ಪ್ರಸ್ತುತ ಕಾಶ್ಮೀರದಲ್ಲಿ ಭಾರತ ಸೇನೆಯೊಂದಿಗೆ ಸೇವೆಯಲ್ಲಿದ್ದಾರೆ. ಅಲ್ಲಿ ಕ್ರಿಕೆಟ್ ಬ್ಯಾಟ್‌ಗೆ ಸಹಿ ಮಾಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕ್ರಿಕೆಟ್‌ನಿಂದ ಎರಡು ತಿಂಗಳ ಬಿಡುವು ಪಡೆದುಕೊಂಡಿರುವ ಧೋನಿ ’106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್(ಪ್ಯಾರಾಚೂಟ್ ರೆಜಿಮೆಂಟ್)’ನಲ್ಲಿ ಎರಡು ವಾರ ಸೇವೆ ಸಲ್ಲಿಸಲಿದ್ದಾರೆ. ಮಂಗಳವಾರದಿಂದ ಕಾಶ್ಮೀರದ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೆಫ್ಟಿನೆಂಟ್ ಕರ್ನಲ್ ಗೌರವ ಪದವಿ ಹೊಂದಿರುವ ಧೋನಿ, ಆಗಸ್ಟ್ 15ರ ವರೆಗೂ ದಕ್ಷಿಣ ಕಾಶ್ಮೀರದ ಘಟಕದಲ್ಲಿ ಇರಲಿದ್ದಾರೆ. ಸೇನೆಯ ಸಮವಸ್ತ್ರದಲ್ಲಿರುವ ಅವರು ಪುಟ್ಟ ಬ್ಯಾಟ್‌ವೊಂದಕ್ಕೆ ಸಹಿ ಮಾಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವಿಮಾನದಲ್ಲಿ ಶ್ರೀನಗರಕ್ಕೆ ತೆರಳುವಾಗಿನಫೋಟೊಸಹ ಈ ಹಿಂದೆ ವೈರಲ್ ಆಗಿತ್ತು. ಸೇನೆಯ ಮೂಲಕ ತರಬೇತಿ ಪಡೆದುಕೊಂಡಿರುವ ಧೋನಿ ನಿಗದಿತ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭರವಸೆ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.