ನವದೆಹಲಿ: ಹಣ ಅಕ್ರಮ ವರ್ಗಾವಣೆಗೆ ಸೈಬರ್ ಅಪರಾಧಿಗಳು ಬಳಸುತ್ತಿದ್ದ ನಕಲಿ ಖಾತೆಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಸಿಬಿಐ, ಬಿಹಾರದ ಪಾಟ್ನಾದಲ್ಲಿ 10ನೇ ಶಂಕಿತನನ್ನು ಬಂಧಿಸಿದೆ.

ಶಂಕಿತನಿಗೆ ವಿದೇಶಗಳೊಂದಿಗೆ ಸಂಪರ್ಕ ಇರುವುದನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಡಿಜಿಟಲ್ ಕಳ್ಳತನ, ಹೂಡಿಕೆ ಹೆಸರಿನಲ್ಲಿ ಮೋಸ, ಯುಪಿಐ ಮೂಲಕ ವಂಚನೆ ಪ್ರಕರಣಗಳಲ್ಲಿ ಸೈಬರ್ ಅಪರಾಧಿಗಳು ಹಣ ಅಕ್ರಮ ವರ್ಗಾವಣೆಗೆ ಬಳಸುತ್ತಿದ್ದ, ದೇಶದ ವಿವಿಧ ಬ್ಯಾಂಕ್ಗಳ 700ಕ್ಕೂ ಹೆಚ್ಚಿನ ಶಾಖೆಗಳಲ್ಲಿ ತೆರೆದಿದ್ದ 8.5 ಲಕ್ಷ ನಕಲಿ ಖಾತೆಗಳ ವಿರುದ್ಧ ಸಿಬಿಐ ಕಾರ್ಯಾಚರಣೆ ಕೈಗೊಂಡಿದೆ.

ರಾಜಸ್ಥಾನ, ದೆಹಲಿ, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶದ 42 ಕಡೆಗಳಲ್ಲಿ ದಾಳಿ ಮಾಡಿದ್ದ ಸಿಬಿಐ, ಒಂಬತ್ತು ಶಂಕಿತರನ್ನು ವಶಕ್ಕೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.