ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: ನಗರಗಳಲ್ಲಿ ನಕ್ಸಲರ ಕಡಿವಾಣಕ್ಕೆ ಮಸೂದೆ ಮಂಡನೆ

Published 11 ಜುಲೈ 2024, 16:14 IST
Last Updated 11 ಜುಲೈ 2024, 16:14 IST
ಅಕ್ಷರ ಗಾತ್ರ

ಮುಂಬೈ: ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ನಕ್ಸಲರ ಜೊತೆಗೆ ನಗರ ಪ್ರದೇಶಗಳಲ್ಲಿರುವ ನಕ್ಸಲರನ್ನು ಹತ್ತಿಕ್ಕುವ ಉದ್ದೇಶದ ಮಸೂದೆ ‘ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ 2024’ ಅನ್ನು ಬಿಜೆಪಿ ನೇತೃತ್ವ ಮಹಾಯುತಿ ಸರ್ಕಾರ ಗುರುವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಿತು.

ನಗರ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯಲು ಇಂತಹದೇ ಕಾಯ್ದೆಯನ್ನು ಈ ಹಿಂದೆ ಛತ್ತೀಸಗಢ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿಯೂ ರಚಿಸಲಾಗಿದೆ.

ಗೃಹ, ಕಾನೂನು ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಈ ಮಸೂದೆ ಮಂಡಿಸಿದರು. ಈ ಪ್ರಕಾರ ಕಾನೂನುಬಾಹಿರ ಚಟುವಟಿಕೆ ತಡೆಗೆ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ.

‘ನಕ್ಸಲರ ಪಿಡುಗು ಕೇವಲ ಕುಗ್ರಾಮ, ಜನವಸತಿ ಕಡಿಮೆ ಇರುವ ಸ್ಥಳಗಳಿಗೆ ಸೀಮಿತವಲ್ಲ. ನಗರ ಪ್ರದೇಶಗಳಲ್ಲಿ ನಕ್ಸಲರ ನೆಲೆ ಹೆಚ್ಚುತ್ತಿದೆ. ನಕ್ಸಲರಿಂದ ಜಪ್ತಿ ಮಾಡಿದ ಸಾಹಿತ್ಯದಿಂದ, ಮಾವೋವಾದಿಗಳ ಜಾಲವು ನಗರಗಳಲ್ಲಿ ಸುರಕ್ಷಿತಾಗಿ ನೆಲೆಸಿದೆ ಎಂಬುದನ್ನು ತೋರಿಸುತ್ತಿದೆ’ ಎಂದು ಫಡಣವೀಸ್ ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT