ಬಲರಾಂಪುರ, ಉತ್ತರ ಪ್ರದೇಶ: ತಾಯಿಯೊಂದಿಗೆ ಮಲಗಿದ್ದ 19 ದಿನದ ಶಿಶುವನ್ನು ಕಾಡುಪ್ರಾಣಿಯೊಂದು ಹೊತ್ತೊಯ್ದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಬಾರಹವಾ ವ್ಯಾಪ್ತಿಯ ಭುಜೆರ ಗ್ರಾಮದಲ್ಲಿ ನಡೆದಿದೆ.

‘ಗೀತಾ ದೇವಿ ತನ್ನ ಮಗು ಕಾಜಲ್ನೊಂದಿಗೆ ಮಲಗಿದ್ದ ವೇಳೆ ಕಾಡುಪ್ರಾಣಿಯು ಮಗುವನ್ನು ಹೊತ್ತೊಯ್ದಿದೆ. ಶಬ್ದ ಕೇಳಿ ಎಚ್ಚರಗೊಂಡು ನೋಡಿದಾಗ ಮಗು ಕಾಣಿಸದಿರುವುದು ಕಂಡು ಗೀತಾ, ಎಲ್ಲರಿಗೂ ವಿಷಯವನ್ನು ತಿಳಿಸಿದ್ದಾರೆ. ನಂತರ ಗ್ರಾಮಸ್ಥರು ಮಗುವಿನ ಪತ್ತೆಗಾಗಿ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಲಿಲ್ಲ ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಡಾ. ಸ್ಯಾಮ್ ಮಾರನ್ ಎಂ. ತಿಳಿಸಿದ್ದಾರೆ.

‘ಪ್ರಾಣಿಯ ಪತ್ತೆಗಾಗಿ ಅರಣ್ಯ ಇಲಾಖೆಯ ಎರಡು ತಂಡಗಳನ್ನು ಕಳುಹಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಾಣಿಯನ್ನು ಸೆರೆ ಹಿಡಿಯಲು ಗ್ರಾಮದ ಬಳಿ ಬೋನುಗಳನ್ನು ಇರಿಸಿದ್ದು, ಟ್ಯಾಕಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.