ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ ಅಬ್ಬರ; ಆ.19ರವರೆಗೆ ಯೆಲ್ಲೊ ಅಲರ್ಟ್‌

Published : 13 ಆಗಸ್ಟ್ 2024, 10:14 IST
Last Updated : 13 ಆಗಸ್ಟ್ 2024, 10:14 IST
ಫಾಲೋ ಮಾಡಿ
Comments

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಆ.19ರವರೆಗೆ ಯೆಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಗುಡ್ಡ ಕುಸಿತ, ಪ್ರವಾಹದ ಅಪಾಯವನ್ನು ತಪ್ಪಿಸಲು 213 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಸೋಮವಾರ ಸಂಜೆಯವರೆಗೆ ನೈನಾ ದೇವಿ ಪ್ರದೇಶದಲ್ಲಿ ದಾಖಲೆಯ 9.64 ಸೆಂ.ಮೀ ಮಳೆಯಾಗಿದ್ದು, ಧರ್ಮಾಶಾಲಾದಲ್ಲಿ 25 ಮಿಲಿ ಮೀಟರ್ ಮಳೆಯಾಗಿದೆ.

ನೆಗಲುಸರಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ, ಕುನ್ನೂರು ಮತ್ತು ಶಿಮ್ಲಾ ಮಧ್ಯೆ ಸಂಪರ್ಕ ಕಡಿತಗೊಂಡಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕುಡಿಯುವ ನೀರಿನ ಪೂರೈಕೆಯಲ್ಲೂ ವ್ಯತ್ಯಯವಾಗಿದೆ.

ಜೂನ್‌ನಿಂದ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಲ್ಲಿ 110 ಜನ ಮೃತಪಟ್ಟಿದ್ದು, ₹1,004 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT