ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿಂದರ್‌‌ ಸಿಂಗ್‌ ಸೇರಿ 6 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Last Updated 6 ಜುಲೈ 2020, 13:54 IST
ಅಕ್ಷರ ಗಾತ್ರ

ಜಮ್ಮು:ಭಯೋತ್ಪಾದಕ ಚಟುವಟಿಕೆಯ ಆರೋಪ ಸಂಬಂಧ, ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ದೇವಿಂದರ್‌ ಸಿಂಗ್‌ ಸೇರಿದಂತೆ ಆರು ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳ ಸೋಮವಾರ ದೋಷಾರೋಪ ಪಟ್ಟಿ ದಾಖಲಿಸಿದೆ.

ಸಿಂಗ್‌ ಜೊತೆಗೆ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ‌ ಕಮಾಂಡರ್‌ ಸೈಯದ್‌ ನವೀದ್ ಮುಷ್ತಾಕ್‌ ಅಲಿಯಾಸ್‌ ನವೀದ್ ಬಾಬು ಮತ್ತು ಇದೇ ಸಂಘಟನೆಯ ಇರ್ಫಾನ್‌ ಶಫಿ ಮಿತ್‌, ರಫಿ ಅಹ್ಮದ್‌ ರಾಥರ್‌ ಮತ್ತು ವ್ಯಾಪಾರಿ ತನ್ವೀರ್‌ ಅಹ್ಮದ್‌ ವಾನಿ, ನವೀದ್‌ ಬಾಬು ಸಹೋದರ ಸೈಯದ್‌ ಇರ್ಫಾನ್‌ ಅಹ್ಮದ್‌ ಹೆಸರೂ ಆರೋಪ ಪಟ್ಟಿಯಲ್ಲಿದೆ.

ಪಾಕಿಸ್ತಾನದ ಹೈಕಮಿಷನ್‌ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕಳೆದ ಜನವರಿಯಲ್ಲಿ ಸಿಂಗ್‌ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT