ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳಸಾಗಣೆ ಆರೋಪ: 14 ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲು

ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಗುಜರಾತ್ ಸಿಐಡಿ
Published 13 ಜನವರಿ 2024, 4:24 IST
Last Updated 13 ಜನವರಿ 2024, 4:24 IST
ಅಕ್ಷರ ಗಾತ್ರ

ಗಾಂಧಿನಗರ (ಗುಜರಾತ್): ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ನಿಕರಾಗುವಾ ವಿಮಾನವನ್ನು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಇತ್ತೀಚೆಗೆ ಫ್ರಾನ್ಸ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿ ಬಳಿಕ ಭಾರತಕ್ಕೆ ವಾಪಸ್‌ ಕಳುಹಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಗುಜರಾತ್ ಪೊಲೀಸ್ ಅಪರಾಧ ತನಿಖಾ ವಿಭಾಗ (ಸಿಐಡಿ) ಎಫ್‌ಐಆರ್ ದಾಖಲಿಸಿದೆ.

ದೆಹಲಿಯ ಮೂವರು ಸೇರಿದಂತೆ 14 ಮಂದಿಯ ವಿರುದ್ಧ ಜನವರಿ 10 ರಂದು ಐಪಿಸಿ ವಿವಿಧ ಸೆಕ್ಷನ್‌ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಶೀಘ್ರವೇ ಅವರನ್ನು ಬಂಧಿಸಲಾಗುದು ಎಂದು ಗುಜರಾತ್ ಸಿಐಡಿ ಹೆಚ್ಚುವರಿ ಮಹಾನಿರ್ದೇಶಕ ಪೊಲೀಸ್ (ADGP)ರಾಜ್ ಕುಮಾರ್ ಪಾಂಡಿಯನ್ ತಿಳಿಸಿರುವುದಾಗಿ ‘ಎಎನ್‌ಐ' ಸುದ್ದಿಸಂಸ್ಥೆ ವರದಿ ಮಾಡಿದೆ.

ಗುಜರಾತಿನಿಂದ ದುಬೈಗೆ, ಅಲ್ಲಿಂದ ನಿಕರಾಗುವಾ ಮತ್ತು ಯುರೋಪಿಯನ್ ಯೂನಿಯನ್‌ಗೆ ತೆರಳಿದ್ದ 66ಕ್ಕೂ ಹೆಚ್ಚು ಪ್ರಯಾಣಿಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT