ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌: ನಿಕರಾಗುವಾ ವಿಮಾನ ತೆರಳಲು ಅವಕಾಶ

Published 24 ಡಿಸೆಂಬರ್ 2023, 19:47 IST
Last Updated 24 ಡಿಸೆಂಬರ್ 2023, 19:47 IST
ಅಕ್ಷರ ಗಾತ್ರ

ಪ್ಯಾರಿಸ್‌ : ‘ಮಾನವ ಕಳ್ಳಸಾಗಣೆ ಶಂಕೆಯಲ್ಲಿ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಫ್ರಾನ್ಸ್‌ ಅಧಿಕಾರಿಗಳು ವಶಕ್ಕೆ ಪಡೆದ ಮೂರು ದಿನದ ಬಳಿಕ ಅದರ ಪ್ರಯಾಣವನ್ನು ಸೋಮವಾರ ಪುನರಾರಂಭಿಸಲು ಅನುಮತಿ ನೀಡಲಾಗಿದೆ’ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ದುಬೈನಿಂದ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಫ್ರಾನ್ಸ್‌ನ ಅಧಿಕಾರಿಗಳು ಗುರುವಾರ ತುರ್ತು ಭೂಸ್ಪರ್ಶ ಮಾಡಿಸಿದ್ದರು. ಪ್ಯಾರಿಸ್‌ನ ಪೂರ್ವಕ್ಕೆ 150 ಕಿ.ಮೀ. ದೂರದಲ್ಲಿರುವ ವಾಟ್ರಿ ನಿಲ್ದಾಣದಲ್ಲಿ ಇಳಿದ ವಿಮಾನದಲ್ಲಿದ್ದ 303 ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತದವರಾಗಿದ್ದರಿಂದ ಈ ಶಂಕೆ ಮೂಡಿತ್ತು.

‘ಶಂಕೆ ಕುರಿತು ವಿಚಾರಣೆ ನಡೆಸಿದ ಫ್ರಾನ್ಸ್‌ನ ನಾಲ್ವರು ನ್ಯಾಯಾಧೀಶರು, ರೊಮೇನಿಯನ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುವ ಎ–340 ವಿಮಾನವು ನಿಲ್ದಾಣದಿಂದ ಹೊರಡಲು ಅನುಮತಿ ನೀಡಿದ್ದಾರೆ. ಪ್ರಯಾಣಿಕರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ಅವರು ನಿರ್ಧರಿಸಿದರು’ ಎಂದು ಫ್ರಾನ್ಸ್‌ನ ಬಿಎಫ್‌ಎಂ ಟಿ.ವಿ. ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT