ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ: 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ 9 ಅಂಧ ವಿದ್ಯಾರ್ಥಿಗಳು

Published 27 ಮೇ 2024, 9:27 IST
Last Updated 27 ಮೇ 2024, 9:27 IST
ಅಕ್ಷರ ಗಾತ್ರ

ಬೆರ್ಹಂಪುರ್(ಒಡಿಶಾ): ಒಡಿಶಾದ ಗಂಜಾನ್ ಜಿಲ್ಲೆಯಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿಯೇ ಇರುವ ಶಾಲೆಯ 9 ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಬಿಎಸ್‌ಇ) ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಐವರು ಬಾಲಕಿಯರು ಸೇರಿ 9 ಮಂದಿ ಅಂಧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅಂಬಾಪುವಾದಲ್ಲಿ ಅಂಧ ವಿದ್ಯಾರ್ಥಿಗಳ ರೆಡ್ ಕ್ರಾಸ್ ಶಾಲೆಯ ಪ್ರಾಂಶುಪಾಲರಾದ ಪ್ರಿಯ ರಂಜನ್ ಮಹಾಕುಡಾ ಹೇಳಿದ್ದಾರೆ.

ಈ ಪೈಕಿ ಒಬ್ಬ ಬಾಲಕಿ 600ಕ್ಕೆ 360 ಅಂಕ ಗಳಿಸುವ ಮೂಲಕ ಬಿ2 ಗ್ರೇಡ್(ಪ್ರಥಮ ದರ್ಜೆ) ಪಡೆದರೆ, 7 ವಿದ್ಯಾರ್ಥಿಗಳು ಸಿ ಗ್ರೇಡ್ ಮತ್ತು ಒಬ್ಬರು ಡಿ ಗ್ರೇಡ್‌ನಲ್ಲಿ ಪಾಸ್ ಆಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಒಡಿಶಾದ ಬಿಎಸ್‌ಇ ಮಂಡಳಿಯು ಭಾನುವಾರ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿತ್ತು.

ಬ್ರೈಲ್ ಪಠ್ಯಪುಸ್ತಕಗಳ ಮೂಲಕ ಈ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಸಹಾಯಕರೊಬ್ಬರ ಮೂಲಕ ಅವರು ಪರೀಕ್ಷೆ ಬರೆದಿದ್ದಾರೆ.

ಬಿ2 ಗ್ರೇಡ್ ಪಡೆದಿರುವ ವಿದ್ಯಾರ್ಥಿನಿ ಭಾರತಿ ಬಿಸೋಯಿ ಸೇರಿದಂತೆ ಎಲ್ಲ 9 ಮಂದಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಇಚ್ಛೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT