ಮಂಗಳವಾರ, 20 ಜನವರಿ 2026
×
ADVERTISEMENT
ADVERTISEMENT

ನೂತನ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ಸ್ವೀಕಾರ: ನಿತಿನ್ ಅವರೇ ನನ್ನ ಬಾಸ್ ಎಂದ ಮೋದಿ

Published : 20 ಜನವರಿ 2026, 14:21 IST
Last Updated : 20 ಜನವರಿ 2026, 14:21 IST
ಫಾಲೋ ಮಾಡಿ
Comments
ಬಿಜೆಪಿಯಲ್ಲಿ ಅಧ್ಯಕ್ಷರು ಬದಲಾಗುತ್ತಾರೆ. ಆದರೆ ಪಕ್ಷದ ಸಿದ್ಧಾಂತ ಬದಲಾಗುವುದಿಲ್ಲ. ನಾಯಕತ್ವ ಬದಲಾಗುತ್ತದೆ. ಆದರೆ ಪಕ್ಷದ ದಿಕ್ಕು ಬದಲಾಗುವುದಿಲ್ಲ
ನರೇಂದ್ರ ಮೋದಿ ಪ್ರಧಾನಿ
ಕಾಂಗ್ರೆಸ್‌ನ ತಪ್ಪುಗಳಿಂದ ಪಾಠ ಕಲಿಯಿರಿ
1984ರಲ್ಲಿ ಶೇ 50ರಷ್ಟು ಮತಗಳನ್ನು ಪಡೆದು ಕಾಂಗ್ರೆಸ್‌ 400 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈಗ 100 ಸ್ಥಾನಗಳನ್ನು ದಾಟಲೂ ಅದು ಹೆಣಗಾಡುತ್ತಿದೆ. ಇಂಥ ದುಃಸ್ಥಿತಿಗೆ ತಲುಪಲು ಕಾರಣವಾದ ಆ ಪಕ್ಷದ ಅವಗುಣಗಳನ್ನು ಗುರುತಿಸಿ ಆ ಪಕ್ಷ ಮಾಡಿದ ತಪ್ಪುಗಳಿಂದ ಪಾಠ ಕಲಿಯಿರಿ. ಆಮೇಲೆ ನೀವು ಅದೇ ತಪ್ಪುಗಳನ್ನು ಮಾಡಬೇಡಿ’ ಎಂದು ಪ್ರಧಾನಿ ಮೋದಿ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಹಲವು ನಾಯಕತ್ವ ಹಲವು ಎತ್ತರಗಳು ‘ಅಟಲ್‌ ಬಿಹಾರಿ ವಾಜಪೇಯಿ ಎಲ್‌.ಕೆ. ಅಡ್ವಾನಿ ಮತ್ತು ಮುರಳಿ ಮನೋಹರ ಜೋಶಿ ಅವರ ನಾಯಕತ್ವದಲ್ಲಿ ಪಕ್ಷವು ಶೂನ್ಯದಿಂದ ಶಿಖರಕ್ಕೆ ಏರಿತು. ಬಳಿಕ ವೆಂಕಯ್ಯ ನಾಯ್ಡು ನಿತಿನ್‌ ಗಡ್ಕರಿ ಸೇರಿ ಹಲವು ಹಿರಿಯ ಸಹೋದ್ಯೋಗಿಗಳು ಪಕ್ಷವನ್ನು ಸಂಘಟನೆಯಾಗಿ ಬೆಳೆಸಿದರು. ರಾಜನಾಥ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಪಕ್ಷವು ಬಹುಮತದ ಸರ್ಕಾರ ರಚಿಸಿತು. ಅಮಿತ್‌ ಶಾ ಅವರ ನಾಯಕತ್ವದಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿತು ಮತ್ತು ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಜೆ.ಪಿ ನಡ್ಡಾ ಅವರ ನಾಯಕತ್ವದಲ್ಲಿ ಪಂಚಾಯಿತಿಯಿಂದ ಸಂಸತ್ತಿನವರೆಗೆ ಪಕ್ಷವು ಮತ್ತಷ್ಟು ಶಕ್ತಿಯುತವಾಯಿತು’ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT